×
Ad

ಸಾಮೂಹಿಕ ಇಫ್ತಾರ್ ಹಣ ರಮಝಾನ್ ಕಿಟ್‌ಗೆ ಬಳಸಿ : ಹೀಗೊಂದು ಸಲಹೆ

Update: 2020-04-19 21:35 IST

ಮಂಗಳೂರು, ಎ.19: ಸಾಮಾನ್ಯವಾಗಿ ರಮಝಾನ್ ಸಂದರ್ಭ ನಗರ-ಹಳ್ಳಿ ಎಂಬ ವ್ಯತ್ಯಾಸವಿಲ್ಲದೆ ಪ್ರತಿಯೊಂದು ಮಸೀದಿಯಲ್ಲಿ ಪ್ರದೀ ದಿನವೂ ಸಾಮೂಹಿಕ ಇಫ್ತಾರ್ ನಡೆಸಲಾಗುತ್ತದೆ. ಹೆಚ್ಚಾಗಿ ಒಬ್ಬೊಬ್ಬ ವ್ಯಕ್ತಿ ಈ ಇಫ್ತಾರ್‌ಗೆ ತಗಲುವ ವೆಚ್ಚವನ್ನು ದಾನ ರೂಪದಲ್ಲಿ ಭರಿಸುತ್ತಾರೆ. ಈ ಬಾರಿ ಕೊರೋನ ಹಿನ್ನೆಲೆಯಲ್ಲಿ ರಮಝಾನ್‌ನಲ್ಲೂ ಮಸೀದಿಗಳಲ್ಲಿ ಸಾಮೂಹಿಕ ಇಫ್ತಾರ್‌ಗೆ ನಿರ್ಬಂಧ ವಿಧಿಸಲಾಗಿದೆ.

ಈಗಾಗಲೆ ಹಸಿದವರ ಹೊಟ್ಟೆ ತಣಿಸುವುದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಂಗಳೂರಿನ ಹೋಪ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಸೈಫ್ ಸುಲ್ತಾನ್ ಈ ಕುರಿತು ಉಪಯುಕ್ತ ಸಲಹೆಯೊಂದನ್ನು ಮಸೀದಿಗಳ ಅಧ್ಯಕ್ಷ/ಕಾರ್ಯದರ್ಶಿ/ಇಮಾಮರಿಗೆ ನೀಡಿದ್ದಾರೆ. ಅಂದರೆ, ಸಾಮೂಹಿಕ ಇಫ್ತಾರ್‌ಗೆ ಪ್ರತೀ ದಿನ ವ್ಯಯಿಸುವ ಕನಿಷ್ಠ 10 ಸಾವಿರ ರೂ.ವನ್ನು ಇಫ್ತಾರ್ ಆಯೋಜಿಸುವವರಿಂದ ಸಂಗ್ರಹಿಸಿ ಕನಿಷ್ಠ 2 ಸಾವಿರ ರೂ. ಮೊತ್ತದ ರಮಝಾನ್ ಕಿಟ್‌ನ್ನು 150 ಕುಟುಂಬಗಳಿಗೆ ವಿತರಿಸುವ ಮೂಲಕ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಹಸಿದವರ ಹೊಟ್ಟೆ ತಣಿಸುವ ಮಹತ್ಕಾರ್ಯವನ್ನು ಮಾಡಬಹುದಾಗಿದೆ. ಎಲ್ಲಾ ಮಸೀದಿಗಳ ಪದಾಧಿಕಾರಿಗಳು/ಇಮಾಮರು ಈ ನಿಟ್ಟಿನಲ್ಲಿ ಈಗಲೇ ಕಾರ್ಯಪ್ರವೃತ್ತರಾದಲ್ಲಿ ಆಯಾ ಜಮಾಅತ್ ವ್ಯಾಪ್ತಿಯ ಅರ್ಹ ಕುಟುಂಬಗಳಿಗೆ ನೆರವಾಗಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News