ಮಹಿಳೆ ಆತ್ಮಹತ್ಯೆ
Update: 2020-04-19 22:29 IST
ಕುಂದಾಪುರ, ಎ.19: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕನ್ಯಾನ ಗ್ರಾಮದ ಮಕ್ಕಿಮನೆ ನಿವಾಸಿ ಮಂಜುನಾಥ ಮೊಗವೀರ ಎಂಬವರ ಪತ್ನಿ ಸುಶೀಲ ಎಂಬವರು ಮಾನಸಿಕವಾಗಿ ನೊಂದು ಎ.19ರಂದು ಮಧ್ಯಾಹ್ನ ಮನೆ ಸಮೀಪದ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.