ಕೊರೋನಾಗೆ ಚೀನಾ ಜವಾಬ್ದಾರಿಯಾಗಿದ್ದರೆ ಪರಿಣಾಮ ಎದುರಿಸಲೇಬೇಕು: ಟ್ರಂಪ್
ವಾಶಿಂಗ್ಟನ್,ಎ.20:ಕೊರೋನಾ ವೈರಸ್ ಹಾವಳಿಯನ್ನು ನಿಯಂತ್ರಿಸಲು ಹೆಣಗಾಡುತ್ತಿರುವ ಅಮೆರಿಕವು ಈ ಭೀಕರ ಸೋಂಕುರೋಗದ ಉಗಮಸ್ಥಾನ ವಾಗಿರುವ ಚೀನಾದ ವಿರುದ್ಧ ಶನಿವಾರ ಕಿಡಿಕಾರಿದೆ.
ಒಂದು ವೇಳೆ ಕೊರೋನಾ ವೈರಸ್ ಸೋಂಕಿನ ಹರಡುವುದಕ್ಕೆ ಚೀನಾವು ಜವಾಬ್ದಾರನಾಗಿದ್ದರೆ ಅದರ ಪರಿಣಾಮವನ್ನು ಅದು ಎದುರಿಸಬೇಕಾದೀತೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಶ್ವೇತಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ‘‘ಒಂದು ವೇಳೆ ಅವರು (ಚೀನಾ) ಗೊತ್ತಿದ್ದೂ ಗೊತ್ತಿದ್ದೂ ಕೊರೋನಾ ವೈರಸ್ ಹರಡಲು ಜವಾಬ್ದಾರರಾಗಿದ್ದಲ್ಲಿ ಅದರ ಪರಿಣಾಮವನ್ನವರು ಎದುರಿಸಲೇಬೇಕು. 1917ರಿಂದೀಚೆಗೆ ಯಾರೂ ಕಂಡು ಕೇಳರಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊವೀಡ್ 19 ಹರಡುವಿಕೆಗೆ ಮುನ್ನ ಚೀನಾದ ಜೊತೆಗೆ ಅಮೆರಿಕದ ಸಂಬಂಧ ಉತ್ತಮವಾಗಿತ್ತು. ಆದರೆ ಈಚೆಗೆ ಹಠಾತ್ತನೇ ಈ ಸಂಬಂಧದಲ್ಲಿ ತುಂಬಾ ವ್ಯತ್ಯಾಸವಾಗಿದೆ’’ ಎಂದು ಅವರು ಹೇಳಿದರು.
“ಚೀನಾದ ಬಗ್ಗೆ ನೀವು ತುಂಬಾ ಆಕ್ರೋಶಗೊಂಡಿದ್ದೀರೇ” ಎಂಬ ಸುದ್ದಿಗಾರರ ಪ್ರಶ್ನೆಗೆ ಹೌದೆಂದು ಉತ್ತರಿಸಿದ ಟ್ರಂಪ್, ಪರಿಸ್ಥಿತಿ ಕೈಮೀರಿ ನಡೆದುಹೋದ ತಪ್ಪಿಗೂ, ಉದ್ದೇಶಪೂರ್ವಕವಾಗಿ ಎಸಗಿದ ತಪ್ಪಿಗೂ ಭಾರೀ ವ್ಯತಾಸವಿದೆ ಎಂದರು. ಆದರೆ ಈ ಎರಡೂ ಸನ್ನಿವೇಶಗಳಲ್ಲಿಯೂ ಕೊರೋನ ವೈರಸ್ ಹಾವಳಿಯ ಬಗ್ಗೆ ಚೀನಾದಲ್ಲಿ ಪರಿಶೀಲನೆ ನಡೆಸಲು ಅಮೆರಿಕಕ್ಕೆ ಅವಕಾಶ ನೀಡಬೇಕಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದರು.
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟಿಕ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಯಾದ ಜೋಬಿಡೆನ್ ಅವರ ಗೆಲುವಿಗಾಗಿ ಚೀನಾ ಪ್ರಯತ್ನಿಸುತ್ತಿದೆ ಎಂದ ವರು ಆಪಾದಿಸಿದರು. ಒಂದು ವೇಳೆ ಜೊಬಿಡೆನ್ ಗೆದ್ದರೆ,ಚೀನವು ಅಮೆರಿಕದ ಮೇಲೆ ಒಡೆತನವನ್ನು ಸಾಧಿಸಲಿದೆ ಎಂರು. ತನ್ನ ಆಡಳಿತದ ದೃಢವಾದ ವಾಣಿಜ್ಯ ನೀತಿಗಳಿಂ ಚೀನಾದಿಂದ ಅಮೆರಿಕಕ್ಕೆು ಬಿಲಿಯಗಟ್ಟೆ ಡಾಲರ್ ಲಾಭವಾಗಿದೆ ಯೆಂದು ಟ್ರಂಪ್ ಹೇಳಿದರು.