ಕೊರೋನ ;ಚೀನಾ ಪಾರದರ್ಶಕವಾಗಿಲ್ಲ: ಆಸ್ಟ್ರೇಲಿಯ
Update: 2020-04-19 23:02 IST
ಮೆಲ್ಬೋರ್ನ್,ಎ.19: ಕೊರೋನಾ ವೈರಸ್ ಸಾಂಕ್ರಾಮಿಕ ಹಾವಳಿಯ ನಿರ್ವಹಣೆಯಲ್ಲಿ ಚೀನಾದ ಪಾರದರ್ಶಕತೆಯನ್ನು ಆಸ್ಟ್ರೇಲಿಯ ಶನಿವಾರ ಪ್ರಶ್ನಿಸಿದೆ. ಈ ಮಾರಕ ವೈರಸ್‌ನ ಉಗಮಸ್ಥಾನ ಹಾಗೂ ಅದು ಹೇಗೆ ಹರಡಿತೆಂಬ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ತನಿಖೆಯಾಗಬೇಕೆಂದು ಆಸ್ಟ್ರೇಲಿಯದ ವಿದೇಶಾಂಗ ಸಚಿವೆ ಮಾರೈಸ್ ಪೆಯ್ನೆ ಆಗ್ರಹಿಸಿದ್ದಾರೆ.
ಆಸ್ಟ್ರೇಲಿಯದಲ್ಲಿ ಈವರೆಗೆ 6586 ಮಂದಿ ಕೊರೋನಾ ಸೋಂಕು ಪೀಡಿತರಾಗಿದ್ದು, 71 ಮಂದಿ ಅಸುನೀಗಿದ್ದಾರೆ. ರವಿವಾರ ಒಂದೇ ದಿನದಲ್ಲಿ 73 ಹೊಸ ಪ್ರಕರಣಗಳು ದಾಖಲಾಗಿವೆ.
ಕೊರೋನ ವೈರಸ್ ಕಳೆದ ವರ್ಷದ ಅಂತ್ಯದಲ್ಲಿ ವುಹಾನ್ ನಗರದ ವನ್ಯಜೀವಿ ಮಾರಾಟದ ಮಾರುಕಟ್ಟೆಯೊಂದರಲ್ಲಿ ಮಾನವರಿಗೆ ಹರಡಿದ್ದು, ಆನಂತರ ಜಗತ್ತಿನಾದ್ಯಂತ 20.30 ಲಕ್ಷ ಮಂದಿಗೂ ಸೋಕು ತಗಲಿದೆ ಹಾಗೂ 1.60 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿದೆ.