ಬ್ರೆಝಿಲ್‌ನಲ್ಲಿ ಲಾಕ್‌ಡೌನ್ ವಿರುದ್ಧ ಪ್ರತಿಭಟನೆ

Update: 2020-04-19 17:51 GMT

 ರಿಯೊ ಡಿ ಜನೈರೊ,ಎ.20: ಕೊರೋನ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಹೇರಿರುವ ಲಾಕ್‌ಡೌನ್ ವಿರೋಧಿಸಿ ಬ್ರೆಜಿಲ್‌ನಲ್ಲಿಯೂ ಪ್ರತಿಭಟನೆಗಳು ಭುಗಿಲೆದ್ದಿವೆ. ದೇಶದ ಪ್ರಮುಖ ನಗರಗಳಾದ ರಿಯೋಡಿ ಜನೈರೊ, ಸಾವೊ ಪೌಲೊ ಹಾಗೂ ಬ್ರೆಸಿಲಿಯಾಗಳಲ್ಲಿ ಟ್ರಕ್,ಕಾರುಗಳು ಹಾಗೂ ಮೋಟಾರ್ ಸೈಕಲ್‌ಗಳಲ್ಲಿ ಬೀದಿಗಿಳಿದ ಜನತೆ, ಲಾಕ್‌ಡೌನ್ ತೆರವಿಗೆ ಆಗ್ರಹಿಸಿದರು. ಈ ಮಧ್ಯೆ ಅಧ್ಯಕ್ಷ ಜೈರ್ ಬೊಲ್ಸೊನಾರೊ ಕರೋನಾ ನಿಯಂತ್ರಿಸಲು ಆರೋಗ್ಯ ಸಚಿವಾಲಯ ದೇಶಾದ್ಯಂತ ಹೇರಲಾಗಿರುವ ನಿರ್ಬಂಧಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News