×
Ad

ಜಗತ್ತಿನಾದ್ಯಂತ 1.60 ಲಕ್ಷ ದಾಟಿದ ಕೊರೋನ ಬಲಿ ಸಂಖ್ಯೆ

Update: 2020-04-19 23:35 IST

ಪ್ಯಾರಿಸ್,ಎ.19 ಜಗತ್ತಿನಾದ್ಯಂತ ಕೊರೋನಾ ಮಹಾಮಾರಿಯ ಅಟ್ಟಹಾಸಕ್ಕೆ ಮಿತಿಯೇ ಇಲ್ಲವಾಗಿದ್ದು, ರವಿವಾರ ಈ ಭೀಕರ ಸೋಂಕಿಗೆ ಬಲಿಯಾದವರ ಸಂಖ್ಯೆ 1.60 ಲಕ್ಷ ದಾಚಿದೆ.ಕೊರೋನಾಗೆ ಬಲಿಯಾದವರಲ್ಲಿ ಮೂರನೇ ಎರಡರಷ್ಟು ಮಂದಿ ಯುರೋಪ್ ರಾಷ್ಟ್ರಗಳಿಗೆ ಸೇರಿದವರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಶನಿವಾರ ಸೋಂಕಿತರ ಸಂಖ್ಯೆ 23,31,318ಕ್ಕೇರಿದ್ದು, ಈವರೆಗೆ ಒಟ್ಟು 1,60,502 ಮಂದಿ ಅಸುನೀಗಿದ್ದಾರೆ. ಯುರೋಪ್‌ನ ದೇಶಗಳಲ್ಲಿ 1,01,398 ಮಂದಿ ಸಾವನ್ನಪ್ಪಿದ್ದು, 11,51,820 ಮಂದಿಗೆ ಸೋಂಕು ತಗಲಿದೆ.

 ಅಮೆರಿಕದಲ್ಲಿಯೂ ಕೊರೋನ ರಣಕೇಕೆ ಮುಂದುವರಿದಿದ್ದು, ಶನಿವಾರದ ತನಕ ಒಟ್ಟು 23,31,318 ಪ್ರಕರಣಗಳು ವರದಿಯಾಗಿವೆ. ಇಟಲಿ 23,77, ಸ್ಪೇನ್ 20453 , ಫ್ರಾನ್ಸ್ 19323 ಹಾಗೂ ಬ್ರಿಟನ್‌ನಲ್ಲಿ 15,464 ಸಾವಿನ ಪ್ರಕರಣಗಳಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News