ಸ್ಪೇನ್: ಸಾವಿನ ಸಂಖ್ಯೆಯಲ್ಲಿ ತೀವ್ರ ಇಳಿಕೆ

Update: 2020-04-19 18:12 GMT

ಮ್ಯಾಡ್ರಿಡ್,ಎ.19: ಕೊರೋನ ಹಾವಳಿಯಿಂದ ತತ್ತರಿಸಿರುವ ಸ್ಪೇನ್‌ನಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ರವಿವಾರ ತೀವ್ರ ಇಳಿಕೆ ಕಂಡುಬಂದಿದೆ. ಶನಿವಾರ 565 ಮಂದಿ ಸೋಂಕಿಗೆ ಬಲಿಯಾಗಿದ್ದರೆ, ಇಂದು 410 ಮಂದಿ ಅಸುನೀಗಿರುವುದಾಗಿ ಸ್ಪೇನ್ ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

 ಆದಗ್ಯೂ ಕಳೆದ 24 ತಾಸುಗಳಲ್ಲಿ 4218 ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 1,95,344ಕ್ಕೇರಿದೆ.

 ಈ ಮಧ್ಯೆ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯುವುದಕ್ಕಾಗಿ ದೇಶಾದ್ಯಂತ ಹೇರಿರುವ ಲಾಕ್‌ಡೌನ್‌ನ್ನು ಸ್ಪೇನ್ ಮೇ 9ರವರೆಗೆ ವಿಸ್ತರಿಸಿದೆ. ಲಾಕ್‌ಡೌನ್‌ನ್ನು 15 ದಿನ ವಿಸ್ತರಿಸಲು ಸಂಸತ್‌ನ ಅನಮತಿ ಕೋರುವುದಾಗಿ ಪ್ರಧಾನಿ ಪೆಡ್ರೋ ವಿಲ್ಸನ್ ತಿಳಿಸಿದ್ದಾರೆ. ಆದಾಗ್ಯೂ ಎಪ್ರಿಲ್ 27ರಿಂದೀಚೆಗೆ ನಿರ್ಬಂಧಗಳು ಹೆಚ್ಚು ಸಡಿಲಗೊಳ್ಳಲಿವೆಯೆಂದು ಅವರು ಹೇಳಿದ್ದಾರೆ.

  ಇಟಲಿಯ ಆನಂತರ ಕೊರೋನಾ ಹಾವಳಿಯಿಂದ ಬಾಧಿತವಾದ ರಾಷ್ಟ್ರ ಸ್ಪೇನ್ ಆಗಿದ್ದು, ಅಲ್ಲಿ 20,043ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News