×
Ad

ಅಮೆರಿಕಾದಲ್ಲಿ ಹೆಚ್ಚುತ್ತಿರುವ ಸಾವಿನ ಸಂಖ್ಯೆ: ಪತ್ರಿಕೆಯ 15 ಪುಟಗಳು ಶ್ರದ್ಧಾಂಜಲಿಗೆ ಮೀಸಲು!

Update: 2020-04-20 14:57 IST

ಹೊಸದಿಲ್ಲಿ: ಅಮೆರಿಕಾದ ಮೆಸ್ಸಾಚುಸೆಟ್ಸ್ ‍ನಲ್ಲಿ ಇಲ್ಲಿಯ ತನಕ 38,000ಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ಹಾಗೂ 1,700ಕ್ಕೂ ಅಧಿಕ ಸಾವುಗಳು ವರದಿಯಾಗಿರುವ ಬೆನ್ನಿಗೇ ಅಮೆರಿಕಾದ ಖ್ಯಾತ ದೈನಿಕ ಬೋಸ್ಟನ್ ಗ್ಲೋಬ್ ತನ್ನ ರವಿವಾರದ ಆವೃತ್ತಿಯಲ್ಲಿ 15 ಪುಟಗಳನ್ನು ಶ್ರದ್ಧಾಂಜಲಿಗೆ ಮೀಸಲಿರಿಸಿತ್ತು.

ಈ ರೀತಿಯಾಗಿ ಪತ್ರಿಕೆಯೊಂದರಲ್ಲಿ ಪುಟಗಟ್ಟಲೆ ಶ್ರದ್ಧಾಂಜಲಿಗಳನ್ನು ತಾವು ಈ ಹಿಂದೆ ನೋಡಿಯೇ ಇಲ್ಲ ಎಂದು ಹಲವು ಟ್ವಿಟ್ಟರಿಗರು ಹೇಳಿಕೊಂಡಿದ್ದಾರೆ.

ಕೊರೋನದಿಂದ ಕಂಗೆಟ್ಟಿರುವ ಇಟಲಿ ದೇಶದ ಪತ್ರಿಕೆ ಬೆರ್ಗಾಮೊ ಇಟೆಲಿ ಕೂಡ ಪುಟಗಟ್ಟಲೆ ಶ್ರದ್ಧಾಂಜಲಿಗಳನ್ನು ಒಂದು ತಿಂಗಳ ಹಿಂದೆ ಪ್ರಕಟಿಸಿತ್ತು ಎಂಬುದನ್ನು ಮೆಸ್ಸಾಚುಸೆಟ್ಸ್ ‍ನ ರಾಜಕೀಯ ನಾಯಕರೊಬ್ಬರು ಟ್ವೀಟ್ ಮಾಡಿದ್ದಾರೆ.

ಅಮೆರಿಕಾದಲ್ಲಿ ಇಲ್ಲಿಯ ತನಕ 7,58,000ಕ್ಕೂ ಅಧಿಕ ಕೊರೋನ ಪ್ರಕರಣಗಳು ವರದಿಯಾಗಿದ್ದು, 41,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News