×
Ad

ಮಂಗಳೂರು: ದಸಂಸದಿಂದ 90 ಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ

Update: 2020-04-20 18:02 IST

ಮಂಗಳೂರು : ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ.ಬಿ.ಕೃಷ್ಣಪ್ಪ  ಸ್ಥಾಪಿತ) ಮಂಗಳೂರು ತಾಲೂಕು ಶಾಖೆ ವತಿಯಿಂದ ಕೊರೋನ ವೈರಸ್ ಲಾಕ್‌ಡೌನ್ ಪರಿಹಾರ ನಿಧಿಯಿಂದ ಮಂಗಳೂರು ತಾಲೂಕು ವ್ಯಾಪ್ತಿಯ ವಿವಿಧೆಡೆ 90ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಸಾಮಗ್ರಿಯ ಕಿಟ್‌ಗಳನ್ನು ವಿತರಿಸಲಾಯಿತು.

ಮಂಗಳೂರು ತಾಲೂಕಿನ ತೆಂಕ ಎಕ್ಕಾರ್, ಬಡಗ ಎಕ್ಕಾರ್, ಕೆಂಚಗುಡ್ಡೆ, ದೇವರಗುಡ್ಡೆ, ಗಿಡಿಗೆರೆ- ಕಟೀಲು, ಕಲ್ಲ ಕುಮೇರ್, ಉಳೆಪಾಡಿ, ಕವತ್ತಾರ್, ಕೆರೆಕಾಡ್, ಪುನರೂರ್, ಕೊಡ್ಯಡ್ಕ, ಕೇಮಾರು, ಕೆಂಜಾರ್ 3ನೇ ಬ್ಲಾಕ್, HPCL  ಕಾಲನಿ, ಜೋಕಟ್ಟೆ, ಬಾರಿಂಜ ಸಹಿತ ವಿವಿಧೆಡೆ ಸುಮಾರು 90ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.

ದಸಂಸ ಪದಾಧಿಕಾರಿಗಳು ತಾಲೂಕಿನ ಆಯಾ ಗ್ರಾಮಗಳಲ್ಲಿ ಕೊರೋನ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಕುರಿತು ಜಾಗೃತಿ ಮೂಡಿಸಿದರು.

ಕಿಟ್ ವಿತರಣಾ ನಿಯೋಗದಲ್ಲಿ ಜಿಲ್ಲಾ ಸಂಚಾಲಕ ರಘು  ಕೆ. ಎಕ್ಕಾರ್, ತಾಲೂಕು ಸಂಚಾಲಕ ರುಕ್ಮಯ ಕಟೀಲ್, ಜಿಲ್ಲಾ ಪದಾಧಿಕಾರಿಗಳಾದ ನಾಗೇಶ್ ಚಿಲಿಂಬಿ, ಲಕ್ಷ್ಮಣ್ ಕಾಂಚನ್, ತಾಲೂಕು ಮಹಿಳಾ ಸಂಚಾಲಕರಾದ ಸೀತಾ ಕೆಂಜಾರ್,  ಶಶಿಕಲಾ ಕಟೀಲ್, ಶಕುಂತಲಾ ಕೊಡ್ಯಡ್ಕ, ತಾಲೂಕು ಪದಾಧಿಕಾರಿಗಳಾದ ರುಕ್ಕಯ್ಯ ಅಮೀನ್ ಕರಂಬಾರ್, ಕೃಷ್ಣ ಕೆ. ಎಕ್ಕಾರ್, ರವಿ ಎಸ್. ಕೆಂಜಾರ್, ಸುರೇಶ್ ಬೆಳ್ಳಾಯರ್, ದೊಂಬಯ್ಯ  ಎಂ. ಕಟೀಲ್, ಉಮೇಶ್ ಕರಂಬಾರ್, ದಲಿತ ಮುಖಂಡರಾದ ಕೇಶವ ಎಕ್ಕಾರ್, ಕಾಳು ನಲಿಕೆ ಕೇಮಾರು, ಸೋಮಾನಂದ ಕವತ್ತಾರು, ಗ್ರಾಮ ಸಮಿತಿ ಪದಾಧಿಕಾರಿಗಳಾದ ನವೀನಚಂದ್ರ ಸಾಲ್ಯಾನ್ ಕರಂಬಾರ್, ಮೋಹನ್ ಎಕ್ಕಾರ್, ಸುರೇಂದ್ರ, ಸುರೇಶ್ ಉಳೆಪಾಡಿ, ಜಯ ಪುನರೂರು, ಆನಂದ ಕೇಮಾರು, ಲಿಂಗಪ್ಪ ಕೆಂಜಾರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News