‘ಕೊರೋನ ಸ್ಟೇ ಹೋಮ್’ ಭಾವನಾತ್ಮಕ ಚಿತ್ರ ಸ್ಪರ್ಧೆ
ಉಡುಪಿ, ಎ.20: ಕೊರೋನ ವೈರಸ್ ವಿರುದ್ಧ ಹೋರಾಟದಲ್ಲಿ ಇಂದು ಲಾಕ್‌ಡೌನ್ ಮತ್ತು ಸ್ಟೇ ಹೋಮ್ ಅನಿವಾರ್ಯವೆನಿಸಿದೆ. ಇಂತಹ ಸಮಯ ದಲ್ಲಿ ಮನೆಯಲ್ಲೇ ನಡೆಯುವ ಭಾವನಾತ್ಮಕ ಕ್ಷಣಗಳ ಚಿತ್ರ ಸ್ಪರ್ಧೆಯನ್ನು ಉಪ್ಪಾ ಟ್ರಸ್ಟ್ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ ಆಯೋಜಿಸಿದೆ.
ಈ ಸ್ಪರ್ಧೆಗೆ ಕಳುಹಿಸುವ ಚಿತ್ರಗಳು ಸ್ಪಷ್ಟವಾಗಿರಬೇಕು. ಮನೆಯೊಳಗೆ ತೆಗಿದಿರಬೇಕು. ಚಿತ್ರಗಳನ್ನು ದೇಶದ ಯಾವುದೇ ಭಾಗದಿಂದಲೂ ಕಳುಹಿಸ ಬಹುದು. ಸ್ಪರ್ಧೆಗೆ ಒಂದೇ ಚಿತ್ರವನ್ನು ಕಳುಹಿಸಬೇಕು. ಜೊತೆಗೆ ಚಿತ್ರ ತೆಗೆದ ಸ್ಥಳ, ವಿಳಾಸವನ್ನು ನಮೂದಿಸಬೇಕು. ಕಳುಹಿಸಿದ ಚಿತ್ರಗಳು ಸ್ವಾಭಾವಿಕವಾಗಿಯೇ ಚಿತ್ರಪ್ರದರ್ಶನಕ್ಕೆ ಅನುಮತಿಯನ್ನು ಪಡೆಯುತ್ತವೆ.
ಸ್ಪರ್ಧೆಯಲ್ಲಿ ವಿಜೇತರಿಗೆ ತಲಾ ಒಂದು ಸಾವಿರ ರೂ. ನಗದು ಹಣ ದೊಂದಿಗೆ ಖ್ಯಾತ ಛಾಯಾಗ್ರಾಹಕರಾದ ಆಸ್ಟ್ರೊ ಮೋಹನ್ ಅವರ ಮೂರು ಜನಪ್ರಿಯ ಕಾಫಿ ಟೇಬಲ್ ಬುಕ್‌ಗಳನ್ನು ಬಹುಮಾನವಾಗಿ ನೀಡಲಾಗುವುದು. ಚಿತ್ರಗಳನ್ನು ವಾಟ್ಸಾಪ್ ಮೂಲಕ ಈ ಕೆಳಗಿನ ಯಾವುದೇ ಮೊಬೈಲ್ ಸಂಖ್ಯೆಗೆ 9448252363, 7204146368ಗೆ ಕಳುಹಿಸಿಕೊಡಬಹುದು. ಚಿತ್ರ ಕಳುಹಿಸಲು ಮೇ 4 ಕೊನೆಯ ದಿನವಾಗಿರುತ್ತದೆ ಎಂದು ಸ್ಪರ್ಧೆಯ ಸಂಘಟಕರ ಪ್ರಕಟಣೆ ತಿಳಿಸಿದೆ.