ಬಜ್ಪೆ: ನ್ಯಾಷನಲ್ ಇಲೆಕ್ಟ್ರಿಕಲ್ ಮಾಲಕ ಚಾಯಬ್ಬ ಹಸನ್ ನಿಧನ
Update: 2020-04-20 19:44 IST
ಮಂಗಳೂರು : ಜೋಕಟ್ಟೆ ಮೂಲದ ಬಜ್ಪೆ ನಿವಾಸಿ ಚಾಯಬ್ಬ ಹಸನ್ ಅವರು ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಜೋಕಟ್ಟೆ ಅಲ್ ಸಲಾಂ ಕುಟುಂಬದವರಾದ ಚಾಯಬ್ಬ ಅವರು ನ್ಯಾಷನಲ್ ಇಲೆಕ್ಟ್ರಿಕಲ್ ಬಜ್ಪೆ ಇದರ ಮಾಲಕರಾಗಿದ್ದರು.
ಅವರು ಪತ್ನಿ, ನಾಲ್ವರು ಪುತ್ರಿಯರು, ಮೂವರು ಪುತ್ರರು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಜೋಕಟ್ಟೆಯಲ್ಲಿ ಸೋಮವಾರ ಅಂತಿಮ ಸಂಸ್ಕಾರ ನಡೆಯಿತು.