×
Ad

ಪುರಸಭಾ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ: ತಂಡದ ವಿರುದ್ಧ ದೂರು

Update: 2020-04-20 21:14 IST

ಬಂಟ್ವಾಳ, ಎ.20: ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಾರೆಕಾಡು ಎಂಬಲ್ಲಿ ನಮ್ಮ ಕರ್ತವ್ಯಕ್ಕೆ ತಂಡವೊಂದು ಅಡ್ಡಿಪಡಿಸಿದೆ ಎಂದು ಆರೋಪಿಸಿ ಪುರಸಭಾ ಅಧಿಕಾರಿಯೊಬ್ಬರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೊರೋನ ವೈರಸ್‍ಗೆ ಸಂಬಂಧಿಸಿ ಕರ್ತವ್ಯದಲ್ಲಿರುವ ಫ್ಲೈಂಗ್ ಸ್ವ್ಕಾಡ್‍ನ ಪುರಸಭಾ ಮಹಿಳಾ ಅಧಿಕಾರಿ ಯಾಸ್ಮೀನ್ ಅವರ ತಂಡದ ಕರ್ತವ್ಯಕ್ಕೆ ಗುಂಪೊಂದು ಅಡ್ಡಿಪಡಿಸಿದಲ್ಲದೆ ಅವರ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರು ನೀಡಲಾಗಿದೆ.

ಲಾಕ್‍ಡೌನ್ ಅವಧಿಯಲ್ಲಿ ಅವಧಿ ಮೀರಿ ಅಂಗಡಿಗಳನ್ನು ತೆರೆದಿಟ್ಟವರನ್ನು ಬಂದ್ ಮಾಡುವಂತೆ ಮತ್ತು ಅನಗತ್ಯವಾಗಿ ಬೈಕ್‍ನಲ್ಲಿ ತಿರುಗಾಟ ನಡೆಸದಂತೆ ತಿಳಿಸಿದ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ದೂರಿನಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News