ಗ್ರಾಪಂ ಆಧಿಕಾರವಧಿಯನ್ನು ವಿಸ್ತರಿಸಲು ಮನವಿ
Update: 2020-04-20 21:18 IST
ಮಂಗಳೂರು, ಎ.20: ಗ್ರಾಪಂಗಳ ಅಧಿಕಾರವಧಿಯು ಮೇ ತಿಂಗಳಿಗೆ ಅಂತ್ಯವಾಗಲಿದೆ. ಈಗಾಗಲೆ ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ವಿವಿಧ ಗ್ರಾಪಂ ಆಡಳಿತವು ಸ್ಥಳೀಯ ಜನರ ಸಹಕಾರ ಮತ್ತು ಸರಕಾರದ ವಿವಿಧ ಇಲಾಖೆ, ಸ್ವಯಂ ಸೇವಾ ಸಂಘಟನೆಗಳ ಮೂಲಕ ಜನಪರವಾಗಿ ಕೆಲಸ ಮಾಡುತ್ತಿದೆ. ಈ ಸಂದರ್ಭ ಗ್ರಾಪಂ ಚುನಾವಣೆ ನಡೆಸುವುದು ಸಮಂಜಸವಲ್ಲ. ಅಲ್ಲದೆ ಹಾಲಿ ಗ್ರಾಪಂ ಆಡಳಿತದ ನೇತೃತ್ವದಲ್ಲಿ ಟಾಸ್ಕ್‌ಪೋರ್ಸ್ ಕಾರ್ಯಪಡೆಯು ಸಮರ್ಥವಾಗಿ ಕೆಲಸ ಮಾಡುತ್ತಿದೆ. ಈ ಸಂದರ್ಭ ಗ್ರಾಪಂ ವಿಸರ್ಜಿಸುವ ಬದಲು ಮುಂದಿನ 6 ತಿಂಗಳ ಕಾಲ ಅಧಿಕಾರವಧಿಯನ್ನು ವಿಸ್ತರಿಸಬೇಕು ಎಂದು ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.