ಸುಳ್ಯದ ಅಜ್ಜಾವರ ಗ್ರಾಮ ಸೀಲ್ ಡೌನ್ : 7 ಕಿ.ಮೀ ಪ್ರದೇಶ ನಿಯಂತ್ರಿತ ವಲಯ ಘೋಷಣೆ

Update: 2020-04-20 16:12 GMT

ಸುಳ್ಯ: ಎ. 20 : ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋವಿಡ್-19 ಸೊಂಕು ಹರಡುವುದರನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂಜಾಗ್ರತ ಕ್ರಮಕೈಗೊಂಡಿದ್ದು, ವೈರಸ್ ನಿಯಂತ್ರಣದ ಸುಲಭ ಅನುಷ್ಠಾನಕ್ಕಾಗಿ ಕೊರೋನಾ ಸೋಂಕಿತರು ಪತ್ತೆಯಾಗಿರುವ ಸುಳ್ಯದ ಅಜ್ಜಾವರ ಗ್ರಾಮದ ನಿರ್ಧಿಷ್ಟ ಪ್ರದೇಶವನ್ನು ನಿಯಂತ್ರಿತ ವಲಯ ಎಂದು ಘೋಷಣೆ ಮಾಡಿ ಸೀಲ್ ಡೌನ್ ಮಾಡಲಾಗಿದೆ.

ಸುಳ್ಯ ತಾಲೂಕಿಗೆ ಸಂಬಂಧಿಸಿ ಅಜ್ಜಾವರ ನಿಯಂತ್ರಿತ ವಲಯಕ್ಕೆ ಸುಳ್ಯ ತಹಶೀಲ್ದಾರ್ ಅವರನ್ನು ಘಟಕ ನಿಯಂತ್ರಕರೆಂದು ಘೋಷಣೆ ಮಾಡಲಾಗಿದೆ. ಅಜ್ಜಾವರ ಗ್ರಾಮ ಸುಳ್ಯ ನಗರಕ್ಕೆ ಸಮೀಪ ಇರುವ ಕಾರಣ ನಗರ ವ್ಯಾಪ್ತಿಯ 5 ಕಿ.ಮೀ ಮತ್ತು ಗ್ರಾಮಾಂತರ ವಲಯದ 7 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಣೆ ಮಾಡಲಾಗಿದೆ.

ಸೀಲ್ ಡೌನ್ ಒಂದು ಕಿ.ಮೀ ವ್ಯಾಪ್ತಿ ಹೊಂದಿದ್ದು ಉತ್ತರಕ್ಕೆ ನೆಲ್ಯಡ್ಕದ ವರೆಗೆ, ದಕ್ಷಿಣಕ್ಕೆ ಕರ್ಲಪ್ಪಾಡಿ ಪ್ರದೇಶ, ಪೂರ್ವಕ್ಕೆ ಸುಳ್ಯಕ್ಕೆ ಬರುವ ಮೇನಾಲದವರೆಗೆ, ಪಶ್ಚಿಮಕ್ಕೆ ಅಡ್ಪಂಗಾಯದವರೆಗೆ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಎ. 20ರ ಬೆಳಿಗ್ಗೆಯಿಂದ ಸೀಲ್ ಡೌನ್ ಮಾಡಲಾಗಿದೆ. ನಿಯಂತ್ರಿತ ವಲಯದಿಂದ ಯಾರು ಕೂಡ ಯಾವುದೇ ಕಾರಣಕ್ಕೂ ಹೊರಗೆ ಹೋಗದಂತೆ ಮತ್ತು ಒಳಗೆ ಬಾರದಂತೆ ನಿಯಂತ್ರಿಸಬೇಕು.
ಅಗತ್ಯ ಸೇವೆಗಳಿಗೆ ಮತ್ತು ವೈದ್ಯಕೀಯ ತುರ್ತು ಸಂದರ್ಭಗಳಿಗೆ ಎಮರ್ಜೇನ್ಸಿ ಪಾಸ್‍ಗಳನ್ನು ಪೊಲೀಸ್ ಇಲಾಖೆ ವಿತರಣೆ ಮಾಡುತ್ತಿದೆ.

ಒಂದು ಕಿ.ಮೀ. ವ್ಯಾಪ್ತಿಯ ಮನೆಯವರು ಮನೆಯಿಂದ ಹೊರಗೆ ಬರುವ ಹಾಗಿಲ್ಲ. ಅವರಿಗೆ ಅಗತ್ಯ ವಿರುವ ಎಲ್ಲ ಸಾಮಾಗ್ರಿ, ಮೆಡಿಸಿನ್, ಕೋಳಿ, ಮೀನು ಮಾಂಸ ಮನೆಗೆ ತಲುಪಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಸಿದ್ಧತೆ ನಡೆಸಿದೆ. ಹಾಲು, ತರಕಾರಿ, ಮೀನು ಬೆಳಗ್ಗೆ 8 ಗಂಟೆಯಿಂದ ಆ ವ್ಯಾಪ್ತಿಯ ಮನೆ ಮನೆಗೆ ಹೋಗಲಿದೆ. ದಿನಸಿ, ಮೆಡಿಸಿನ್, ಕೋಳಿ ಬೇಕಾದಲ್ಲಿ ತಾಲೂಕು ಆಡಳಿತ ಗೊತ್ತುಪಡಿಸಿರುವ ಅಂಗಡಿಯವರಿಗೆ ದೂರವಾಣಿ ಮೂಲಕ ತಿಳಿಸಿದರೆವತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಅದರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಂಟ್ರೋಲ್ ರೂಂ ನಂಬರ್ 08257-230330, ಅಥವಾ ಸ್ಥಳೀಯ ಗ್ರಾ.ಪಂ. ಅಧಿಕಾರಿ, ಸಿಬ್ಬಂದಿಗಳಿಗೆ ಕರೆ ಮಾಡಿ ವಿಚಾರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News