ಪಾದರಾಯನಪುರ ಕಠಿಣ ಕ್ರಮಕ್ಕೆ ಆಗ್ರಹ
Update: 2020-04-20 21:48 IST
ಉಡುಪಿ, ಎ.20: ಬೆಂಗಳೂರಿನ ಪಾದರಾಯನಪುರ ಘಟನೆಗೆ ಸಂಬಂಧಿಸಿ ರಾಜ್ಯ ಸರಕಾರ ಓಲೈಕೆ ರಾಜಕಾರಣವನ್ನು ಬಿಟ್ಟು ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಈ ಘಟನೆಗಳಿಗೇ ಸರಕಾರದ ಮೃದುಧೋರಣೆಯೇ ಮುಖ್ಯ ಕಾರಣ. ದುಷ್ಕರ್ಮಿಗಳ ಜೊತೆ ಸರಕಾರ ದುರ್ಬಲ ರೀತಿಯಲ್ಲಿ ವ್ಯವಹರಿಸುವುದನ್ನು ಬಿಟ್ಟು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಕಾರ್ಯಾಚರಿಸ ಬೇಕು. ಶಾಸಕ ಜಮೀರ್ ಅಹ್ಮದ್ರನ್ನು ಗಲಭೆಕೋರರಿಗೆ ಬೆಂಬಲ ನೀಡಿದ ದೂರಿನಡಿಯಲ್ಲಿ ಬಂಧಿಸಬೇಕು. ಗಲಭೆಕೋರರ ಆಸ್ತಿಪಾಸ್ತಿಗಳನ್ನು ಮುಟ್ಟು ಗೋಲು ಹಾಕುವುದರ ಜೊತೆಗೆ ಅವರ ವಿರುದ್ಧ ರೌಡಿಶೀಟ್ ತೆರೆಯಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.