ಬೈಂದೂರು: ರಕ್ತದ ಕೊರತೆ ನೀಗಿಸಲು 82 ದಾನಿಗಳಿಂದ ರಕ್ತದಾನ
Update: 2020-04-20 22:31 IST
ಬೈಂದೂರು, ಎ.20: ಕುಂದಾಪುರ ಹಾಗೂ ಬೈಂದೂರು ತಾಲೂಕಿನಾದ್ಯಂತ ರಕ್ತದ ಅವಶ್ಯಕತೆಯನ್ನು ಅರಿತ ನಾವುಂದ ಫ್ರೆಂಡ್ಸ್ ಉಡುಪಿ ಜಿಲ್ಲಾಡಳಿತ ಹಾಗೂ ಇಂಡಿಯನ್ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಇಂದು ನಾವುಂದ ಶಾದಿ ಮಹಲ್ನಲ್ಲಿ ರಕ್ತಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಬಿರವನ್ನು ನಾವುಂದ ಮೊಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬ್ಲಡ್ ಹೆಲ್ಪ್ಕೇರ್ ಕರ್ನಾಟಕ ಇದರ ಫಯಾಝ್ ಅಲಿ, ನಾವುಂದ ಫ್ರೆಂಡ್ಸ್ನ ನೌಷಾದ್, ಜಿಲ್ಲಾ ಒಕ್ಕೂಟದ ಸದಸ್ಯ ತಬ್ರೇಝ್ ನಾಗೂರು, ಮಸೀದಿ ಉಪಾಧ್ಯಕ್ಷ ಮನ್ಸೂರ್ ಮರವಂತೆ, ಬ್ಲಡ್ ಹೆಲ್ಪ್ಕೇರ್ನ ಮುಬೀನ್ ಶಿರೂರು, ವೈದ್ಯಾಧಿಕಾರಿ ಡಾ. ಸೋನಿ ಹಾಗೂ ವೀರೇಂದ್ರ ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು 82 ದಾನಿಗಳು ರಕ್ತದಾನ ಮಾಡಿದರು.