ಕಾರ್ಮಿಕ ಆತ್ಮಹತ್ಯೆ
Update: 2020-04-20 22:32 IST
ಹಿರಿಯಡ್ಕ, ಎ.21: ಬೈರಂಪಳ್ಳಿ ಗ್ರಾಮದ ಸಾಂತ್ಯಾರು ಎಂಬಲ್ಲಿ ಶಕ್ತಿ ಇಂಪೆಕ್ಸ್ ಎಂಬ ವಿದ್ಯುತ್ ಪರಿವರ್ತಕಾ ಉತ್ಪಾದನಾ ಕಾರ್ಖಾನೆಯ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.19ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಬೀದರ್ ಜಿಲ್ಲೆಯ ನೇಲಗಿಯ ಮಹೇಶ(29) ಎಂದು ಗುರು ತಿಸಲಾಗಿದೆ. ವೈಯಕ್ತಿಕ ಕಾರಣದಿಂದ ಮನನೊಂದ ಮಹೇಶ್, ವಸತಿ ಗೃಹದ ಅಡುಗೆ ಕೋಣೆಯ ಮಾಡಿನ ಕಬ್ಬಿಣದ ಆ್ಯಂಗಲ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.