ಕೋವಿಡ್ 19 : ಜನಜಾಗೃತಿ ಮೂಡಿಸುವ ಅತ್ಯುತ್ತಮ ವಿಡಿಯೋಕ್ಕೆ ನಿಟ್ಟೆ ಸಂಸ್ಥೆಯಿಂದ ಬಹುಮಾನ
ಕೊಣಾಜೆ: ಕೋವಿಡ್ -19 ಸಾಂಕ್ರಾಮಿಕ ರೋಗದ ಬಗ್ಗೆ ಜನರು ಭಯಭೀತರಾಗದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ವಿನೂತನ ಪ್ರಯೋಗವೊಂದಕ್ಕೆ ಮುಂದಾಗಿದ್ದು ಅದರಂತೆ ಸಾರ್ವಜನಿಕರು ಜ್ವರ, ಒಣ ಕೆಮ್ಮು, ದಣಿವು, ಉಸಿರಾಟದ ತೊಂದರೆ ಇರುವವರು ಸರ್ಕಾರ ಗೊತ್ತುಪಡಿಸಿದ 'ಫೀವರ್ ಕ್ಲಿನಿಕ್' ನಲ್ಲೇ ಪರೀಕ್ಷೆ ಮಾಡಿಸುವಂತೆ ಪ್ರೋತ್ಸಾಹಿಸುವ ಜನಜಾಗೃತಿ ಮೂಡಿಸುವ ಮೂರು ನಿಮಿಷದ ಅತ್ಯುತ್ತಮ ವಿಡಿಯೋಕ್ಕೆ ನಗದು ಬಹುಮಾನ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವಿಡಿಯೋ ಮಾಡುವವರು ಜ್ವರ, ಒಣ ಕೆಮ್ಮು, ದಣಿವು ಅಥವಾ ಉಸಿರಾಟದ ತೊಂದರೆಗಳಿಗೆ ಸರ್ಕಾರ ಗೊತ್ತುಪಡಿಸಿದ 'ಫೀವರ್ ಕ್ಲಿನಿಕ್' ನಲ್ಲೇ ಪರೀಕ್ಷೆ ಮಾಡಿಸುವಂತೆ ಜನರನ್ನು ಪ್ರೋತ್ಸಾಹಿಸುವುದು. ಸಂಸ್ಥೆಗೆ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ಎ.22, ಸ್ವರೂಪ: ಎಚ್-360, ಡಬ್ಲ್ಯು-640 ನೊಂದಿಗೆ ಎಂಪಿ4 ಅವಧಿ: ಗರಿಷ್ಠ 3 ನಿಮಿಷ , ಗೂಗಲ್ ಲಿಂಕ್ ಡ್ರೈವ್ ಅನ್ನು it@nitte.edu.in ಗೆ ಕಳುಹಿಸಬೇಕು.
ಸಲ್ಲಿಸಿದ ಯಾವುದೇ ವೀಡಿಯೊಗಳನ್ನು ಬಳಸುವ ಹಕ್ಕನ್ನು ನಿಟ್ಟೆ ಸಂಸ್ಥೆ ಹೊಂದಿದ್ದು ವೀಡಿಯೊದಲ್ಲಿ ಬಳಸಲು ಭಾಗವಹಿಸುವವರ ಒಪ್ಪಿಗೆ ಪಡೆಯುವುದು ಅತಿ ಮುಖ್ಯ. ಇಂತಹ ಹೊಸ ಆಲೋಚನೆಗಳು ಸಾರ್ವಜನಿಕರಿಗೆ ಶಿಕ್ಷಣ ನೀಡಲು ಸಹಾಯವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.