×
Ad

ಅಮ್ಮೆಂಬಳ ಹೆಲ್ಪ್ ಲೈನ್‌ನಿಂದ ರಮಝಾನ್ ಕಿಟ್ ವಿತರಣೆ

Update: 2020-04-21 18:11 IST

ಮಂಗಳೂರು, ಎ.21: ಕೊರೋನ ವೈರಸ್ ನಿಂದ ತತ್ತರಿಸಿರುವ ಜನತೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮಂಗಳೂರು ತಾಲೂಕಿನ ಬೋಳಿಯಾರ್ ಗ್ರಾಮದ ಅಮ್ಮೆಂಬಳದ ಜುಮಾ ಮಸ್ಜಿದ್ ಮತ್ತು ಅಮ್ಮೆಂಬಳ ಹೆಲ್ಪ್ ಲೈನ್ ಅಧ್ಯಕ್ಷ,  ಬಿ. ಉಬೈದುಲ್ಲಾ ಅಮ್ಮೆಂಬಳ, ಜಮಾಅತ್‌ನ ಉತ್ಸಾಹಿ ಯುವಕರ ಸಹಕಾರದಿಂದ 53 ಮನೆಗಳಿಗೆ ತಲಾ 4,250 ರೂ. ಮೊತ್ತದ (ಒಟ್ಟು 2.25 ಲಕ್ಷ ರೂ.) ದಿನಬಳಕೆಯ ಆಹಾರ ಪದಾರ್ಥಗಳನ್ನು ಒಳಗೊಂಡ ರಮಝಾನ್ ಕಿಟ್ ವಿತರಿಸಿದರು.

ಜಮಾಅತ್‌ನ ಎಲ್ಲಾ ಮನೆಗಳಿಗಲ್ಲದೆ ಮಸೀದಿಯ ಉಸ್ತಾದರಿಗೆ ಕೂಡ ಕಿಟ್ ವಿತರಿಸಿದರು.

ಹೆಲ್ಪ್‌ಲೈನ್ ಸಂಚಾಲಕ ಸಿರಾಜುದ್ದೀನ್ ಅಮ್ಮೆಂಬಳ ಸಂದೇಶ ಭಾಷಣ ಮಾಡಿದರು. ಮಸೀದಿಯ ಉಪಾಧ್ಯಕ್ಷ ಹನೀಫ್ ಬಿಐಟಿ, ಕರೀಂ ಜಿ., ಮಾಜಿ ಅಧ್ಯಕ್ಷ ಬಂಡಸಾಲೆ ಬಾವಾ, ಸಿದ್ದೀಕ್ ಜಿ., ಹನೀಫ್ ಎಸ್., ಪ್ರಧಾನ ಕಾರ್ಯದರ್ಶಿ ಶಬೀರ್ ಕೋಟೆ, ಹೆಲ್ಪ್‌ಲೈನ್ ಸಂಚಾಲಕ ಪರ್ವಿಝ್, ನಿಝಾಮ್, ಮನ್ಸೂರ್, ಲತೀಫ್, ನಬೀಲ್, ನಿಸಾರ್ ದುಬೈ, ಫಾರೂಕ್ ಕೋಟೆ ಮತ್ತಿತರರು ಉಪಸ್ಥಿತರಿದ್ದರು.

ಹೆಲ್ಪ್‌ಲೈನ್ ಸದಸ್ಯ ಜವಾದ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News