×
Ad

ಉಡುಪಿ: ಅನುಮತಿಯಿಲ್ಲದೇ ಪ್ಯಾರಸಿಟಮಾಲ್ ಆಧಾರಿತ ಔಷಧ ಮಾರಾಟ ನಿಷೇಧ

Update: 2020-04-21 21:11 IST

ಉಡುಪಿ, ಎ.21: ನೋವೆಲ್ ಕರೋನಾ ವೈರಸ್(ಕೋವಿಡ್-19) ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು, ಉಡುಪಿ ಜಿಲ್ಲೆಯ ಎಲ್ಲಾ ಚಿಲ್ಲರೆ ಔಷಧ ವ್ಯಾಪಾರಸ್ಥರು, ಕೆಮ್ಮು, ಶೀತ, ಜ್ವರ, ದಣಿವು, ಉಸಿರಾಟದ ತೊಂದರೆಗಳಂತಹ ರೋಗ ಲಕ್ಷಣಗಳಿಗೆ, ಪ್ಯಾರಸಿಟಮಲ್ ಆಧಾರಿತ ಔಷಧಿಗಳನ್ನು ವೈದ್ಯರ ಸಲಹಾ ಚೀಟಿಯಿಲ್ಲದೇ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ವೈದ್ಯರ ಚೀಟಿಯೊಂದಿಗೆ ನೀಡುವಾಗಲೂ ರೋಗಿಯ ಹೆಸರು, ವೈದ್ಯರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮುಂತಾದ ಎಲ್ಲಾ ದಾಖಲೆ ಗಳನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಮೇಲಿನ ಸೂಚನೆಗಳನ್ನು ಪಾಲಿಸದಿದ್ದಲ್ಲಿ, ಅಂತಹವರ ವಿರುದ್ದ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940ರಡಿ ಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ವೃತ್ತದ ಸಹಾಯಕ ಔಷಧ ನಿಯಂತ್ರಕ ನಾಗರಾಜ್ ತಿಳಿಸಿದ್ದಾರೆ.

ಕೆಮ್ಮು, ಶೀತ,ಜ್ವರ, ದಣಿವು ಮತ್ತು ಉಸಿರಾಟದ ತೊಂದರೆಗಳಂತಹ ಯಾವುದೇ ಅನುಮಾನಾಸ್ಪದ ಪ್ರಕರಣಗಳು ಕಂಡುಬಂದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ತಿಳಿಸುವಂತೆ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News