×
Ad

ಉಡುಪಿ: ತಾನೇ ಕಷ್ಟದಲ್ಲಿದ್ದರೂ 140 ಮನೆಗೆ ಅಕ್ಕಿ ಹಂಚಿದ ಶಾರದಕ್ಕ

Update: 2020-04-21 21:28 IST

ಉಡುಪಿ, ಎ.21: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸಿಕ್ಕಿದ ಮೀನು ಮಾರಿ ಪುಟ್ಟ ಗುಡಿಸಲಲ್ಲಿ ಜೀವನ ಸಾಗಿಸುತ್ತಿರುವ ಶಾರದಕ್ಕ ಕೊರೋನ ವೈರಸ್‌ನಿಂದ ಕಂಗೆಟ್ಟ ಸಮಯದಲ್ಲಿ ಅಪರೂಪದ ಹೃದಯ ವೈಶಾಲ್ಯದ ಕೆಲಸ ಮಾಡಿದ್ದಾರೆ.

ಇವರು ಮಲ್ಪೆ ವಡಬಾಂಡೇಶ್ವರ ವಾರ್ಡ್ ನೆರ್ಗಿಯಲ್ಲಿ ಒಟ್ಟು 140 ಮನೆಗಳಿಗೆ ತಲಾ 5 ಕೆಜಿಯಂತೆ 700 ಕೆಜಿ ಅಕ್ಕಿ ಹಂಚಿ ಯಾವುದೇ ಪ್ರಚಾರವಿಲ್ಲದೆ ಸೇವೆಯೇ ನನ್ನ ಧರ್ಮ ಅಂತ ಮೌನವಾಗಿ ತನ್ನ ಮನೆ ಸೇರಿದ್ದಾರೆ.

ಅವರು ಈ ಬಗ್ಗೆ ಹೇಳಿಕೊಳ್ಳದಿದ್ದರೂ, ಸ್ಥಳೀಯರಿಂದ ಮಾಹಿತಿ ಪಡೆದು ಶಾರದಕರನ್ನು ಭೇಟಿಯಾಗಿ ಮಾತನಾಡಿಸಿದಾಗ ತನ್ನ ಕೈಯಲ್ಲಿ ಸಾಧ್ಯವಾದರೆ ಮತ್ತಷ್ಟು ಮಂದಿಗೆ ಇದೇ ರೀತಿ ನೀಡುತ್ತೇನೆ ಎಂದರು. ತನಗೆ ನ್ಯಾಯಬೆಲೆ ಅಂಗಡಿಯಲ್ಲಿ ದೊರೆತ ಅಕ್ಕಿಯನ್ನೂ ಕೂಡ ಇವರು ತನ್ನ ಮನೆ ವಠಾರದ ಕೂಲಿ ಕಾರ್ಮಿಕರಿಗೆ ಹಂಚಿ ಸೇವೆ ಪದಕ್ಕೆ ಅರ್ಥ ತಂದು ಕೊಟ್ಟಿದ್ದಾರೆ. ಇದಕ್ಕಾಗಿ ಅನೇಕರಿಂದ ಶಾರದಕ್ಕನಿಗೆ ಶ್ಲಾಘನೆಯೂ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News