×
Ad

ಜೂಜಾಟ: ಆರು ಮಂದಿಯ ಬಂಧನ

Update: 2020-04-21 23:17 IST

ಬಂಟ್ವಾಳ, ಎ.21: ತಾಲೂಕಿನ ತೆಂಕಕಜೆಕಾರು ಎಂಬಲ್ಲಿ ಎಪ್ರಿಲ್ 19ರಂದು ಸಂಜೆ ಜೂಜಾಟದಲ್ಲಿ ತೊಡಗಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು, 2,15,100 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭ ಏಳು ಮಂದಿ ಆರೋಪಿಗಳು ಪರಾರಿಯಾಗಿದ್ದಾರೆ.

ಉಳಿ ಗ್ರಾಮದ ಮುಸ್ತಫ, ಮೂಡುಪಡುಕೋಡಿ ನಿವಾಸಿ ಹೈದರ್, ಕಾವಳಪಡೂರು ನಿವಾಸಿ ನವಾಝ್, ಬಡಗಕಜೆಕಾರಿನ ಜಾನ್ ಮೊರಾಸ್, ಸೋಣಂದೂರಿನ ಶಬೀರ್, ಮಾಲಾಡಿ ನಿವಾಸಿ ಲೋಕೇಶ್ ಬಂಧಿತ ಆರೋಪಿಗಳು.

ಕೊರೋನ ಸಾಂಕ್ರಾಮಿಕ ರೋಗ ಕೋವಿಡ್ - 19 ಅನ್ನು ತಡೆಗಟ್ಟುವ ಸಲುವಾಗಿ ಜಿಲ್ಲಾಡಳಿತವು ಜನ ಗುಂಪುಗೂಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರೂ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಆರೋಪಿಗಳು ಗುಂಪುಗೂಡಿ ಆಟವಾಡಿದ್ದು ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News