×
Ad

ಕೊರೋನ ವೈರಸ್ : ಪ್ರಧಾನಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ಪತ್ರ

Update: 2020-04-21 23:19 IST

ಮಂಗಳೂರು, ಎ.21: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಕೇಂದ್ರ ಸರಕಾರ ತೆಗೆದುಕೊಂಡ ಕ್ರಮವನ್ನು ಶ್ಲಾಘಿಸಿರುವ ದ.ಕ.ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯು ಪ್ರಧಾನಿ ನರೇಂದ್ರ ಮೋದಿ ಕೊರೋನ ರೋಗಬು ಧರ್ಮ ಆಧಾರಿತವಲ್ಲ ಎಂದು ಹೇಳಿಕೆ ನೀಡಿರುವುದನ್ನು ಸ್ವಾಗತಿಸಿದೆ.

ಈ ಬಗ್ಗೆ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಮಸೂದ್ ಪ್ರಧಾನಿಗೆ ಪತ್ರವೊಂದನ್ನು ಬರೆದು ‘ನೀವು ತೆಗೆದುಕೊಂಡ ನಿರ್ಧಾರ ಗಳಿಂದಾಗಿ ಭಾರತದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಕನಿಷ್ಠ ಮಟ್ಟದಲ್ಲಿದೆ. ಈ ನಡುವೆ, ಮುಸ್ಲಿಂ ಸಮುದಾಯ ವನ್ನು ಗುರಿಯಾಗಿಸಿ ಭಾರತದಲ್ಲಿ ವೈರಸ್ ಹರಡುವುದಕ್ಕೆ ಈ ಸಮುದಾಯವನ್ನು ದೂಷಿಸಲು ಪ್ರಯತ್ನಿಸುತ್ತಿರುವ ಕೆಲವು ದುರದೃಷ್ಟಕರ ಘಟನೆಗಳ ಬಗ್ಗೆ ತಾವು ‘ಕೋವಿಡ್ 19 ಮಹಾಮಾರಿ ಪ್ರತಿಯೊಬ್ಬರಿಗೂ ಸಮಾನವಾಗಿ ಬಾಧಿಸುತ್ತದೆ. ಮತ್ತು ಈ ಸೋಂಕು ಹರಡುವಾಗ ಯಾವುದೇ ಜಾತಿ, ಮತ, ಧರ್ಮ, ಭಾಷೆ ಅಥವಾ ಗಡಿಯನ್ನು ನೋಡುವುದಿಲ್ಲ’ ಎಂಬ ಹೇಳಿಕೆಗೆ ನಾನು ಅಭಾರಿಯಾಗಿರುವೆ. ಈ ಹೇಳಿಕೆಯು ಮುಸ್ಲಿಂ ಸಮುದಾಯದಲ್ಲಿ ಆತ್ಮವಿಶ್ವಾಸ ಮತ್ತು ಭರವಸೆಯ ಭಾವವನ್ನು ಮೂಡಿಸಿದೆ. ನಿಮ್ಮ ನಾಯಕತ್ವದಲ್ಲಿ ನಾವು ಈ ಪರಿಸ್ಥಿತಿಯನ್ನು ಸಮರ್ಥವಾಗಿ ದಾಟಲಿದ್ದೇವೆ ಎಂಬ ಭರವಸೆಯನ್ನು ನಾನು ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News