ವಾರ್ಡ್ ಮಟ್ಟದಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಿ: ಯುನಿವೆಫ್ ಆಗ್ರಹ

Update: 2020-04-22 08:51 GMT

ಮಂಗಳೂರು, ಎ.22: ದೇಶದಲ್ಲಿ ಕೊರೋನ ವೈರಸ್ ಸೋಂಕು ದೃಢೀಕರಣಗೊಂಡ ರೋಗಿಗಳಲ್ಲಿ ಸುಮಾರು 80% ಜನರಲ್ಲಿ ರೋಗಲಕ್ಷಣಗಳು ಗೋಚರಿಸಿರಲಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಪರಿಸ್ಥಿತಿ ಈ ರೀತಿ ಇರುವಾಗ ಪ್ರತಿಯೊಬ್ಬರು ತಾನು ಕೋರೋನ ರೋಗಿಯೇ ಎಂಬ  ಆತಂಕ ಪಡುವ  ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸರಕಾರ  ಲಘುವಾಗಿ ಪರಿಗಣಿಸದೆ ಕೆಲವು ಕಠಿಣ ಹಾಗು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಯುನಿವೆಫ್ ಕರ್ನಾಟಕ ಒತ್ತಾಯಿಸಿದೆ.

  ಪ್ರತಿಯೊಂದು ವಾರ್ಡ್ ಮಟ್ಟದಲ್ಲಿ ಕೊರೋನ ತಪಾಸಣಾ  ಕೇಂದ್ರಗಳನ್ನು ಸರಕಾರ ಆರಂಭಿಸಬೇಕು. ಆ ಮೂಲಕ ಜನರಲ್ಲಿ ಇರುವಂತಹ ಆತಂಕವನ್ನು ದೂರೀಕರಿಸಬೇಕಾಗಿದೆ.   ಪರಿಸ್ಥಿತಿ ಇನ್ನೂ ಅಪಾಯಕಾರಿ ಮಟ್ಟಕ್ಕೆ ತಲುಪುವ ಮೊದಲು ರಾಜ್ಯ ಸರಕಾರ ಸಮಾರೋಪಾದಿಯಾಗಿ ಇದನ್ನು  ಮಾಡಬೇಕೆಂದು ಯುನಿವೆಫ್ ಹೇಳಿಕೆಯಲ್ಲಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News