ಉಚ್ಚಿಲ ಪರಿಸರದ 259 ಕುಟುಂಬಗಳಿಗೆ 3.80 ಲಕ್ಷ ರೂ. ಮೌಲ್ಯದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

Update: 2020-04-22 09:27 GMT

ಕಾಪು, ಎ.22: ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಉಚ್ಚಿಲ ಪರಿಸರದ ಅರ್ಹರಿಗೆ ಉಚ್ಚಿಲ ಭಾಸ್ಕರ ನಗರದ ಅಲ್ ಇಸ್ಲಾಮಿಯ ಯಂಗ್ ಮೆನ್ಸ್ ಅಸೋಸಿಯೇಶನ್, ರಿಫಾಯಿ ದಫ್ ಕಮಿಟಿ ಮತ್ತು ಗಲ್ಪ್ ಸಂಸ್ಥೆಗಳಾದ ಅಲ್ ಇಸ್ಲಾಮಿಯ ಯೂತ್ ಫೆಡರೇಶನ್ ರಿಯಾದ್, ಅಲ್ ಖೋಬರ್ ದುಬೈ ವತಿಯಿಂದ ಸುಮಾರು 3.80 ಲಕ್ಷ ರೂ. ಮೌಲ್ಯದ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.  

ಉಚ್ಚಿಲ ಪರಿಸರದ ಪೊಲ್ಯ, ಮುಳ್ಳಗುಡ್ಡೆ, ಕುಂಜೂರು, ಪಣಿಯೂರು, ಭಾಸ್ಕರ ನಗರ, ದೇಜಾಡಿ, ಬೆಳಪು ಇಲ್ಲಿಯ ಸುಮಾರು 259 ಬಡ ಮತ್ತು ಮಧ್ಯಮ ವರ್ಗದ ಎಲ್ಲ ಜಾತಿ-ಧರ್ಮಗಳ ಕುಟುಂಬಗಳಿಗೆ ವಿತರಿಸಲಾಯಿತು.  

ಸಂಸ್ಥೆಯ ಅಧ್ಯಕ್ಷ ಸೈಯದ್ ಅಸಾಸುದ್ದಿನ್ ತಂಙಳ್ ದುಆ ನೆರವೇರಿಸುದರೊಂದಿಗೆ ಕಿಟ್ ವಿತರಣೆಗೆ ಚಾಲನೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News