×
Ad

ಎ.23ರಿಂದ ಮಕ್ಕಳಿಗೆ ಚುಚ್ಚುಮದ್ದು: ಉಡುಪಿ ಡಿಎಚ್‌ಒ

Update: 2020-04-22 20:14 IST

ಉಡುಪಿ, ಎ.22: ಕೋವಿಡ್ ಲಾಕ್‌ಡೌನ್‌ನಿಂದ ಐದು ವರ್ಷದೊಳಗಿನ ಮಕ್ಕಳಿಗೆ ವಿವಿಧ ಹಂತಗಳಲ್ಲಿ ನೀಡುವ ಮತ್ತು ಗರ್ಭಿಣಿಯರಿಗೆ ನೀಡಬೇಕಾದ ಚುಚ್ಚುಮದ್ದುಗಳನ್ನು ನಿಲ್ಲಿಸಲಾಗಿದ್ದು, (ಗುರುವಾರ) ಎಂದಿನಂತೆ ಈ ಚುಚ್ಚುಮದ್ದುಗಳನ್ನು ನೀಡಲಾಗುವುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಸುಧೀರ್‌ಚಂದ್ರ ಸೂಡಾ ತಿಳಿಸಿದ್ದಾರೆ.

  ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸೋಮವಾರದಿಂದ ಶನಿವಾರದವರೆಗೆ ಮತ್ತು ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತೀ ಗುರುವಾರ, 1.5, 2.5 3.5 ಮತ್ತು 9 ತಿಂಗಳು ಮಕ್ಕಳಿಗೆ ನೀಡುವ ವಿವಿಧ ಲಸಿಕೆಗಳು ಹಾಗೂ ಗರ್ಭಿಣಿಯರಿಗೆ ನೀಡಲಾಗುವ ಟಿಡಿ ಲಸಿಕೆಯನ್ನು ನೀಡಲಾಗುವುದು ಎಂದು ಡಾ. ಸೂಡಾ ತಿಳಿಸಿದ್ದಾರೆ.

ಲಸಿಕೆ ತೆಗೆದುಕೊಳ್ಳಲು ವಾಹನಗಳಲ್ಲಿ ಬರುವಾಗ ತಾಯಿ ಕಾರ್ಡ್ ಅಥವಾ ಲಸಿಕೆ ಕಾರ್ಡ್‌ಗಳನ್ನು ಪೊಲೀಸರಿಗೆ ತೋರಿಸುವ ಮೂಲಕ ಆರೋಗ್ಯ ಕೇಂದ್ರಕ್ಕೆ ಬರಲು ಲಾಕ್‌ಡೌನ್‌ನ ನಿರ್ಬಂಧವಿರುವುದಿಲ್ಲ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಂ.ಜಿ.ರಾಮ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News