×
Ad

ತುರ್ತು ಅಗತ್ಯಗಳಿಗೆ ರಕ್ತದ ಕೊರತೆ: ರೆಡ್‌ಕ್ರಾಸ್‌ನಿಂದ ಕೋವಿಡ್-19 ಪ್ರಯುಕ್ತ ರಕ್ತದಾನ ಶಿಬಿರ

Update: 2020-04-22 20:19 IST

ಉಡುಪಿ, ಎ. 22: ನೋವೆಲ್ ಕೊರೋನ ವೈರಸ್ ವ್ಯಾಪಕವಾಗಿ ಹರಡು ತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದ್ದು, ಇದರಿಂದ ರಕ್ತದ ತೀವ್ರ ಅಭಾವ ಉಂಟಾಗಿದೆ. ಹೀಗಾಗಿ ಉಡುಪಿ ಪರಿಸರದ ಎಲ್ಲಾ ಆಸ್ವತ್ರೆಗಳಲ್ಲಿ ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ವತ್ರೆ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ಅಜ್ಜರಕಾಡಿನ ರೆಡ್‌ಕ್ರಾಸ್ ಭವನದಲ್ಲಿ ಬುಧವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ, ಉಡುಪಿ ಜಿಲ್ಲೆಯ ಎಲ್ಲಾ ಆಸ್ವತ್ರೆಗಳಲ್ಲಿ ರಕ್ತದ ಕೊರತೆ ಕಂಡುಬಂದಿದೆ ಎಂದರು., ರಕ್ತದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದ ಅವರು ಕೊರೋನ ಭೀತಿಯ ಸಂದರ್ಭದಲ್ಲಿಯೂ ರೆಡ್ ಕ್ರಾಸ್ ಸಂಸ್ಥೆ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಹೆಮ್ಮೆ ವಿಷಯ ಎಂದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ಕೋವಿಡ್-19 ವೈರಸನ್ನು ತಡೆಗಟ್ಟುವ ಸಲುವಾಗಿ ಈಗಾಗಲೇ ಕೈಗೊಂಡ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ಉಡುಪಿ ಜಿಲ್ಲೆಯ 20,000ಕ್ಕೂ ಅಧಿಕ ಕಟ್ಟಡ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೆ ಫೇಸ್ ಮಾಸ್ಕ್, ಡೆಟೋಲ್ ಸೋಪ್, ಹ್ಯಾಂಡ್ ಗ್ಲಾಸ್ಸ್ ಮತ್ತು ಕೋವಿಡ್-19 ಜಾಗೃತಿ ಮಾಹಿತಿ ಕರಪತ್ರಗಳನ್ನು ನೀಡಲಾಗಿದೆ. ಈದ ದೇಶವೇ ಲಾಕ್‌ಡೌನ್‌ನಲ್ಲಿರುವುದರಿಂದ ಹೆಚ್ಚಿನ ಆಸ್ವತ್ರೆಗಳಲ್ಲಿ ರಕ್ತದ ಕೊರತೆ ಇದ್ದು, ರಕ್ತದ ಅವಶ್ಯಕತೆ ಇರುವವರ ಪಾಲಿಗ ಜೀವಾಮೃತ ನೀಡಲು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆಗೆ 1000 ಫೇಸ್ ಮಾಸ್ಕ್, 1000 ಡೆಟಾಲ್ ಸೋಪ್ ಮತ್ತು 1000 ಹ್ಯಾಂಡ್ ಗ್ಲಾಸ್ಸ್ ಗಳನ್ನು ಸಭಾಪತಿ ಬಸ್ರೂು ರಾಜೀವ್ ಶೆಟ್ಟಿ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಮಾಜಿಸಭಾಪತಿ ಡಾ. ಉಮೇಶ್ ಪ್ರಭು, ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ., ಗೌರವ ಖಚಾಂಚಿ ಟಿ.ಚಂದ್ರಶೇಖರ್, ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ, ಆಡಳಿತ ಮಂಡಳಿ ಸದಸ್ಯರಾದ ಜಯರಾಮ್ ಆಚಾರ್ಯ, ಕೆ.ಸನ್ಮತ್ ಹೆಗ್ಡೆ, ಅಶೋಕ ಹೆಗ್ಡೆ ಹಾಗೂ ಕಸ್ತೂರ್ಬಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಶೆಮಿ ಶಾಸ್ತ್ರಿ ಮ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳಿಂದ 60 ಯುನಿಟ್‌ಗೂ ಅಧಿಕರಕ್ತವನ್ನು ಸಂಗ್ರಹಿಸಿ ಮಣಿಪಾಲದ ಕಸ್ತೂರ್ಬಾ ಆಸ್ವತ್ರೆಗೆ ನೀಡಲಾುತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News