×
Ad

ಕೋವಿಡ್-19 ಸಂಕಟ ಹಿನ್ನೆಲೆ : ಅಶಕ್ತ ಕಲಾವಿದರಿಗೆ ಕನ್ನಡ, ಸಂಸ್ಕೃತಿ ಇಲಾಖೆಯಿಂದ ಆರ್ಥಿಕ ಸಹಾಯ

Update: 2020-04-22 20:22 IST

ಉಡುಪಿ, ಎ.22: ಕೋವಿಡ್-19 ಸೋಂಕಿನ ಹರಡುವಿಕೆ ತಡೆಯಲು ಇಡೀ ರಾಜ್ಯ ಲಾಕ್‌ಡೌನ್ ಆಗಿರುವುದರಿಂದ ಆರ್ಥಿಕವಾಗಿ ಸಂಕಷ್ಟದಲ್ಲಿ ರುವ ಕಲಾವಿದರು/ಸಾಹಿತಿಗಳಿಗೆ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆರ್ಥಿಕ ಸಹಾಯ ಮಾಡಲು ನಿರ್ಧರಿಸಲಾಗಿದೆ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಎಲ್ಲಾ ಕಲಾ ಪ್ರಕಾರಗಳ ಕಲಾವಿದರು/ಸಾಹಿತಿಗಳು ಇದಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ವೃತ್ತಿ ನಿರತರಾಗಿದ್ದು ಕನಿಷ್ಠ 10 ವರ್ಷ ಕಲಾಸೇವೆ ಮಾಡಿರಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿ ಯಿಂದ ಮಾಸಾಶನ ಪಡೆಯುತ್ತಿರಬಾರದು ಮತ್ತು ಯಾವುದೇ ಸರಕಾರಿ (ರಾಜ್ಯ/ಕೇಂದ್ರ/ನಿಗಮ/ಮಂಡಳಿ/ಸರ್ಕಾರಿ ಅನುದಾನಿತ ಸಂಸ್ಥೆಗಳು ಮತ್ತು ಅರೆ ಸರಕಾರಿ ಸಂಸ್ಥೆಗಳು) ನೌಕರರರಾಗಿರಬಾರದು.

ಕಲಾವಿದರು /ಸಾಹಿತಿಗಳು ತಮ್ಮ ಹೆಸರು, ವಿಳಾಸ, ಕಲಾ ಪ್ರಕಾರ, ಆಧಾರ್ ಸಂಖ್ಯೆ, ದೂರವಾಣಿ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನೊಳಗೊಂಡ ಅರ್ಜಿಯನ್ನು ಬಿಳಿ ಹಾಳೆಯ ಮೇಲೆ ಸ್ವವಿವರಗಳೊಂದಿಗೆ, ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರಗತಿ ನಗರ, ಅಲೆವೂರು ಗ್ರಾಮ, ಉಡುಪಿ, ಈ ಮೇಲ್- dkc.udupi@gmail.com- ಅಥವಾ ಮೊಬೈಲ್ ಸಂ.-9945731062ಗೆ ವಾಟ್ಸಾಪ್ ಮೂಲಕ ಎ.27ರ ಒಳಗೆ ಸಲ್ಲಿಸುವಂತೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News