×
Ad

ಪಾರ್ಸೆಲ್ ವಿಶೇಷ ರೈಲು ಸೇವೆ

Update: 2020-04-22 20:54 IST

ಮಂಗಳೂರು, ಎ.22: ಕೊಂಕಣ್ ರೈಲ್ವೇ ವತಿಯಿಂದ ಓಖಾ ಮತ್ತು ತಿರುವನಂತಪುರ ಸೆಂಟ್ರಲ್ ನಡುವೆ ಪಾರ್ಸೆಲ್ ವಿಶೇಷ ರೈಲುಗಳ ಸಂಚಾರ ನಡೆಯಲಿದೆ.

ರೈಲು ಸಂಖ್ಯೆ 00933 ಓಖಾ ತಿರುವನಂತಪುರ ಸೆಂಟ್ರಲ್ ಪಾರ್ಸೆಲ್ ಸ್ಪೆಷಲ್ ಎ. 27ರಂದು ಮಧ್ಯಾಹ್ನ 1.10 ಗಂಟೆಗೆ ಓಖಾದಿಂದ ಹೊರಟು ರತ್ನಗಿರಿ, ಕನಕವಲ್ಲಿ, ಮಡಗಾಂವ್ ಜಂಕ್ಷನ್, ಉಡುಪಿ ಮಾರ್ಗವಾಗಿ ಎ. 29ರಂದು ಮಧ್ಯಾಹ್ನ 12 ಗಂಟೆಗೆ ತಿರುವನಂತಪುರ ಸೆಂಟ್ರಲ್‌ಗೆ ತಲುಪಲಿದೆ.

ರೈಲು ಸಂಖ್ಯೆ 00934 ಎ. 29ರಂದು ರಾತ್ರಿ 11 ಗಂಟೆಗೆ ತಿರುವನಂತಪುರ ಸೆಂಟ್ರಲ್‌ನಿಂದ ಹೊರಟು ಓಖಾಕ್ಕೆ ಮೇ 1ರಂದು ರಾತ್ರಿ 9.40ಕ್ಕೆ ತಲುಪಲಿದೆ. ರೈಲು ಜಾಮ್‌ನಗರ, ರಾಜ್‌ಕೋಟ್, ಸುರೇಂದ್ರನಗರ, ಅಹ್ಮದಾಬಾದ್, ಆನಂದ, ವಡೋದರ, ಬಾರುಚ್, ತ್ರಿಶೂರ್, ಎರ್ನಾಕುಲಂ ನಗರ, ಕೊಟ್ಟಾಯಂ ಮತ್ತು ಕೊಲ್ಲಂ ಜಂಕ್ಷನ್‌ಗಳಲ್ಲಿ ವಾಣಿಜ್ಯ ನಿಲುಗಡೆಯನ್ನು ಹೊಂದಿರುತ್ತದೆ. ಆಸಕ್ತ ಗ್ರಾಹಕರು ತಮ್ಮ ಸರಕುಗಳನ್ನು ಸಾಗಿಸಲು ಬಯಸಿದ್ದಲ್ಲಿ ಕೊಂಕಣ ರೈಲ್ವೇಯ ರತ್ನಗಿರಿ, ಕನಕವಲ್ಲಿ, ಮಡಗಾಂ, ಉಡುಪಿ ನಿಲ್ದಾಣಗಳಲ್ಲಿನ ಪಾರ್ಸೆಲ್ ಕಚೇರಿ ಗಳನ್ನು ಸಂಪರ್ಕಿಸಬಹುದು ಎಂದು ಕೊಂಕಣ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News