ವ್ಯವಹಾರದಲ್ಲಿ ನಷ್ಟ; ಆತ್ಮಹತ್ಯೆ

Update: 2020-04-22 16:31 GMT

ಅಮಾಸೆಬೈಲು, ಎ.22: ಕೋಳಿ ಸಾಕಾಣಿಕೆ ವ್ಯವಹಾರದಲ್ಲಿ ಉಂಟಾದ ಎರಡು ಲಕ್ಷ ರೂ.ಗಳಿಗೂ ಅಧಿಕ ನಷ್ಟದಿಂದ ಮನನೊಂದು ಯುವಕನೋರ್ವ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಅಮಾಸೆಬೈಲು ಗ್ರಾಮದಿಂದ ವರದಿಯಾಗಿದೆ.

ಅಮಾಸೆಬೈಲು ಗ್ರಾಮ ಬೊಳ್ಮನೆಯ ಗಣೇಶ ನಾಯ್ಕ (37) ಆತ್ಮಹತ್ಯೆ ಮಾಡಿಕೊಂಡ ಯುವಕ. ಇವರು ಕೋಳಿ ಫಾರಂನ್ನು ಹೊಂದಿದ್ದು ಕೋಳಿ ಸಾಕಾಣಿಕೆ ಉದ್ಯಮ ನಡೆಸಿಕೊಂಡು ಬರುತಿದ್ದು, ಇತ್ತೀಚೆಗೆ ಕೋಳಿಗಳಿಗೆ ಸರಬರಾಜು ಆಗುವ ಆಹಾರ ಸಿಗದೇ ಕಂಪೆನಿಯವರು ಕೋಳಿಗಳನ್ನು ದಫನ ಮಾಡುವಂತೆ ತಿಳಿಸಿದಂತೆ ಗಣೇಶ ನಾಯ್ಕ ಸುಮಾರು 2 ಲಕ್ಷ ರೂ. ಮೌಲ್ಯದ 3000 ಕೋಳಿಗಳನ್ನು ಧಪನ ಮಾಡಿದ್ದರು.

ಇದರಿಂದ ಉದ್ಯಮಕ್ಕೆ ಪಡೆದ ಸಾಲದಿಂದ ಚಿಂತಿತರಾದ ಅವರು ನಿನ್ನೆ ಅಪರಾಹ್ನ 12:45ರ ಸುಮಾರಿಗೆ ಬೊಳ್ಮನೆ ಕ್ರಾಸ್ ಬಳಿ ಸರಕಾರಿ ಕಾಡಿನಲ್ಲಿ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News