ಸಾಮೂಹಿಕ ಇಫ್ತಾರ್ ಕೂಟ-ತರಾವೀಹ್ ನಮಾಝ್ ಬೇಡ : ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ
ಮಂಗಳೂರು, ಎ. 22: ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ವಿಧಿಸಲ್ಪಟ್ಟ ಲಾಕ್‌ಡೌನ್‌ನ ಪಾಲಿಸುವುದು ಕಡ್ಡಾಯವಾಗಿದೆ. ಈಗಾಗಲೆ ಸರಕಾರ, ಜಿಲ್ಲಾಡಳಿತ, ವಕ್ಫ್ ಮಂಡಳಿಯು ಸಾಮೂಹಿಕವಾಗಿ ಯಾವುದೇ ಕಾರ್ಯಕ್ರಮ ಆಯೋಜಿಸದಂತೆ ಸೂಚಿಸಿದೆ. ಅದರಂತೆ ಮಸೀದಿ ಗಳಲ್ಲಿ ಸಾಮೂಹಿಕ ನಮಾಝ್, ಪ್ರಾರ್ಥನೆ, ಪ್ರವಚನ ಇತ್ಯಾದಿಗೆ ನಿರ್ಬಂಧ ಹೇರಲಾಗಿದೆ. ಇದೀಗ ರಮಝಾನ್ ಉಪವಾಸವೂ ಆರಂಭಗೊಳ್ಳಲಿದ್ದು, ಈ ಸಂದರ್ಭ ಮಸೀದಿಯಲ್ಲಿ ಸಾಮೂಕವಾಗಿ ನಮಾಝ್, ಜುಮ್ಮಾ ನಮಾಝ್, ತರಾವೀಹ್ ನಮಾಝ್ ನಿರ್ವಹಿಸ ಬಾರದು. ಅಲ್ಲದೆ ಅಕ್ಕಪಕ್ಕದವರನ್ನು ಸೇರಿಸಿ ಒಂದೆಡೆ ನಮಾಝ್ ನಿರ್ವಹಿಸುವುದು ಕೂಡ ಲಾಕ್‌ಡೌನ್‌ನ ಉಲ್ಲಂಘನೆಯಾಗಲಿದೆ. ಹಾಗಾಗಿ ಎಲ್ಲರೂ ಮನೆಯಲ್ಲೇ ನಮಾಝ್ ನಿರ್ವಹಿಸಬೇಕು ಎಂದು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯುಕೆ ಕಣಚೂರು ಮೋನು ಮನವಿ ಮಾಡಿದ್ದಾರೆ.
ಎಲ್ಲರೂ ಸುರಕ್ಷಿತ ಅಂತರ ಕಾಪಾಡಿಕೊಂಡು ಕೊರೋನ ವೈರಸ್ ರೋಗವನ್ನು ತಡೆಯುವಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ, ಪೋಲೀಸ್ ಇಲಾಖೆಯೊಂದಿಗೆ ಜಿಲ್ಲೆಯ ಎಲ್ಲಾ ಮಸೀದಿ ಹಾಗೂ ದರ್ಗಾಗಳ ಆಡಳಿತ ಸಮಿತಿಯವರುಮ ಜಮಾಅತ್ ಸದಸ್ಯರು ಹಾಗೂ ಮಸೀದಿಯ ಎಲ್ಲಾ ಸಿಬ್ಬಂದಿ ವರ್ಗದವರು ಕೈ ಜೋಡಿಸಲು ಮತ್ತು ರಮಝಾನ್‌ನಲ್ಲಿ ಕೊರೋನ ವೈರಸ್ ನಿರ್ಮೂಲನಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.