ಬಂಗಾಳಕ್ಕೆ ದೋಷಯುಕ್ತ ಕಿಟ್ : ಮಮತಾ ಆಕ್ರೋಶ

Update: 2020-04-23 05:59 GMT

ಕೋಲ್ಕತಾ, ಎ.22: ಪಶ್ಚಿಮ ಬಂಗಾಳದಲ್ಲಿ ಕೊರೋನ ವೈರಸ್ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯ ಪರಿಶೀಲನೆ ನಡೆಸಲು ಕೇಂದ್ರದ ವೀಕ್ಷಕರು ಆಗಮಿಸುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರಕಾರ ಕೊರೋನ ಸೋಂಕು ಪತ್ತೆಗೆ ದೋಷಯುಕ್ತ ಕಿಟ್‌ಗಳನ್ನು ರಾಜ್ಯಕ್ಕೆ ಪೂರೈಸಿದೆ ಎಂದು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕೊರೋನ ಸೋಂಕು ಪರೀಕ್ಷೆ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ದಿನಾ ಸುದ್ದಿ ಹರಡಿಸಲಾಗುತ್ತಿದೆ. ಆದರೆ ಕೇಂದ್ರ ಸರಕಾರ ಪರೀಕ್ಷೆ ನಡೆಸಲು ಒದಗಿಸಿರುವ ಕಿಟ್‌ನಲ್ಲೇ ದೋಷವಿದೆ. ಒಬ್ಬ ವ್ಯಕ್ತಿಯನ್ನು ಎರಡು ಮೂರು ಬಾರಿ ಪರೀಕ್ಷೆ ನಡೆಸಿದರೂ ನಿಖರ ಫಲಿತಾಂಶ ಬಾರದಿರುವ ಪರಿಸ್ಥಿತಿಯಿದೆ. ಹೀಗಿರುವಾಗ ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುತ್ತಿರುವುದು ಸರಿಯೇ ಎಂದವರು ಪ್ರಶ್ನಿಸಿದ್ದಾರೆ.

   ಹಾಗೆ ಮಾಡಿ, ಹೀಗೆ ಮಾಡಬೇಡಿ ಎಂದು ಪ್ರತೀ ದಿನ ಕೇಂದ್ರ ಸರಕಾರ ಸೂಚಿಸುತ್ತಿದೆ. ರಾಜ್ಯದಲ್ಲಿರುವ ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸಲು, ಕೊರೋನ ವಿರುದ್ಧದ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಲು ವೀಕ್ಷಕರನ್ನು ಕಳುಹಿಸುತ್ತಿದೆ. ಕಠಿಣ ಪದ ಬಳಸಿ ಪತ್ರ ಬರೆಯುತ್ತಿದ್ದಾರೆ. ನಾವೂ ಇದೇ ರೀತಿಯ ಪದ ಬಳಸಿ ಉತ್ತರಿಸಬಹುದು. ಆದರೆ ನಾವು ಹಾಗೆ ಮಾಡುವುದಿಲ್ಲ . ರಾಜ್ಯ ಸರಕಾರ ಕೊರೋನ ಹರಡದಂತೆ ಕಠಿಣ ನಿರ್ಬಂಧಗಳನ್ನು ಕೈಗೊಂಡಿದೆ ಎಂದವರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News