×
Ad

ಗಂಜಿಮಠ: ಸಬೀಲುರ್ರಶಾದ್ ಜುಮಾ ಮಸೀದಿಯ 3 ತಿಂಗಳ ವಂತಿಕೆ, ಮನೆಗಳ ಬಾಡಿಗೆ ಮನ್ನಾ

Update: 2020-04-23 14:17 IST

ಗಂಜಿಮಠ : ಲಾಕ್ ಡೌನ್ ಹಿನ್ನೆಲೆಯಲ್ಲಿ ಗಂಜಿಮಠ ವ್ಯಾಪ್ತಿಯ ಸಬೀಲುರ್ರಶಾದ್ ಜುಮಾ ಮಸೀದಿ ಜಮಾಅತ್ ಅಧೀನಕ್ಕೊಳಪಡುವ ಮನೆಯವರು ಎಪ್ರಿಲ್, ಮೇ ಹಾಗೂ ಜೂನ್ ತಿಂಗಳ ಮಾಸಿಕ ವಂತಿಕೆ ಹಾಗೂ ಮಸೀದಿಯ ಕಟ್ಟಡದಲ್ಲಿ ಇರುವ ಮನೆಗಳ ತಿಂಗಳ ಬಾಡಿಗೆ ಮನ್ನ ಮಾಡಲಾಗುವುದು ಎಂದು ಜಮಾಅತ್ ಕಮಿಟಿ ಅಧ್ಯಕ್ಷ ಎ.ಎಚ್.ನೌಶಾದ್ ಹಾಜಿ ಸೂರಲ್ಪಾಡಿ ತಿಳಿಸಿದ್ದಾರೆ.

ಕೊರೋನ ವೈರಸ್ ಗೆ ಜಗತ್ತು ತತ್ತರಿಸಿದ್ದು , ನಮ್ಮ ದೇಶದಲ್ಲೂ ಈ ಮಾರಕ ವೈರಸ್ ನಿಂದಾಗಿ ಕಳೆದ ಒಂದು ತಿಂಗಳಿನಿಂದ ಲಾಕ್ ಡೌನ್ ಆಗಿ ಜನರು ಅನಿವಾರ್ಯವಾಗಿ ಮನೆಯಲ್ಲೇ ಉಳಿದಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನತೆ ದಿನ ಬಳಕೆಯ ಆಹಾರ ವಸ್ತುಗಳ ಕೊರತೆಯಿಂದ ತೀರಾ ಸಂಕಷ್ಟಕ್ಕೀಡಾಗಿ ಕಷ್ಟ ಅನುಭವಿಸುತ್ತಿದ್ದಾರೆ. ಈ ಸಂದರ್ಭ ಶ್ರೀಮಂತರು ಹಾಗೂ ಸಮಾಜ ಕಾಳಜಿಯ ಸಂಘಟನೆಗಳು ಸಾಧ್ಯವಾದಷ್ಟು ದಿನಸಿ ಸಾಮಾನುಗಳನ್ನು ಕಷ್ಟದಲ್ಲಿರುವವರಿಗೆ ನೀಡಿ ಸಹಕರಿಸುವುದು ಅಗತ್ಯ. ಇದು ಅತ್ಯಂತ ಪುಣ್ಯದ, ಶ್ರೇಷ್ಠ ಕಾರ್ಯವೂ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಸಬೀಲುರ್ರಶಾದ್ ಜುಮ್ಮಾ ಮಸೀದಿಯ ಆಡಳಿತ ಸಮಿತಿ ವತಿಯಿಂದ ಎಪ್ರಿಲ್, ಮೇ ಹಾಗೂ ಜೂನ್ ಈ ಮೂರು ತಿಂಗಳ ವಂತಿಕೆ ಮನ್ನ ಮಾಡಲಾಗುವುದು, ಮಸೀದಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗುರುಗಳಿಗೆ ವೇತನ ನೀಡುವುದು ಹಾಗೂ ಮಸೀದಿಯ ಕಟ್ಟಡದಲ್ಲಿ ವಾಸವಾಗಿರುವಂತಹ ಮನೆಗಳ ತಿಂಗಳ ಬಾಡಿಗೆ ಮನ್ನ ಮಾಡಲಾಗುವುದು ಎಂದು ತೀರ್ಮಾನ ಮಾಡಿದೆ. ಮತ್ತು ಪ್ರತೀ ಜಮಾಅತ್ ಸದಸ್ಯರಿಗೆ ರಮಝಾನ್ ಅದಲ್ಲದೆ  ಜಮಾಅತ್ ವ್ಯಾಪ್ತಿಯಲ್ಲಿರುವ ಎಲ್ಲಾ ಮನೆಗಳಿಗೆ (ರೇಷನ್) ಕಿಟ್ ನೀಡಲಾಗುತ್ತಿದೆ.

ಎ.ಎಚ್.ನೌಶಾದ್ ಹಾಜಿ ಸೂರಲ್ಪಾಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News