ಲಾಕ್ ಡೌನ್ : ಜೆಪ್ಪು ಜಮಾಅತ್ ಕಮಿಟಿಯಿಂದ ಕಿಟ್ ವಿತರಣೆ
Update: 2020-04-23 14:50 IST
ಮಂಗಳೂರು : ಜೆಪ್ಪು ಮುಹಿಯದ್ದೀನ್ ಜುಮಾ ಮಸೀದಿಯ ಆಡಳಿತ ಸಮಿತಿ ವತಿಯಿಂದ ಹಿಂದೂ-ಮುಸ್ಲಿಂ-ಕ್ರೈಸ್ತ ವ್ಯತ್ಯಾಸವಿಲ್ಲದೆ ದಿನಸಿ ಸಾಮಗ್ರಿಗಳ ಕಿಟ್ಟನ್ನು ಜೆಪ್ಪು ವ್ಯಾಪ್ತಿಯಲ್ಲಿ ವಿತರಿಸಲಾಯಿತು ಎಂದು ಜೆಪ್ಪು ಜುಮಾ ಮಸೀದಿಯ ಆಡಳಿತ ಸಮಿತಿ ತಿಳಿಸಿದೆ.
ಕರೋನ ವೈರಸ್ ಜಗತ್ತನ್ನೇ ತಲ್ಲಣಗೊಳಿಸಿದೆ. ಲಾಕ್ ಡೌನ್ ಆಗಿರುವ ಕಾರಣ ಶ್ರೀಮಂತ ಬಡವ ಎನ್ನುವ ವ್ಯತ್ಯಾಸವಿಲ್ಲದೆ ಎಲ್ಲರೂ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಅದೆಷ್ಟೋ ವರ್ಷಗಳಲ್ಲಿ ಕಂಡು ಕೇಳರಿಯದ ಸಮಸ್ಯೆಗೆ ಜನತೆ ಸಿಲುಕಿದ್ದಾರೆ. ಇವೆಲ್ಲದರ ಮಧ್ಯೆ ಅದೆಷ್ಟೋ ಜನರು ದುಡಿಮೆ ಇಲ್ಲದೆ ದುಡ್ಡಿಲ್ಲದೆ ದುಡ್ಡಿದ್ದರೂ ವ್ಯವಹರಿಸಲು ಸಾಧ್ಯವಾಗದೆ ಒಂದು ಹೊತ್ತಿನ ಅನ್ನಕ್ಕಾಗಿ ಪರದಾಡುವ ಸ್ಥಿತಿಯಲ್ಲಿದ್ದು, ಇದರಿಂದ ಜೆಪ್ಪು ಮುಹಿಯದ್ದೀನ್ ಜುಮಾ ಮಸೀದಿಯ ಆಡಳಿತ ಸಮಿತಿ ವತಿಯಿಂದ ಹಿಂದೂ-ಮುಸ್ಲಿಂ-ಕ್ರೈಸ್ತ ವ್ಯತ್ಯಾಸವಿಲ್ಲದೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.