×
Ad

ಪುತ್ತೂರು; ಡಯಾಲಿಸಿಸ್ ರೋಗಿಗಳಿಗೆ ಉಚಿತ ವಾಹನ ಸೌಲಭ್ಯ

Update: 2020-04-23 20:27 IST

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುವ ರೋಗಿಗಳನ್ನು ಉಚಿತವಾಗಿ ಮನೆಗೆ ತಲುಪಿಸುವ ಕಾರ್ಯ ಯೋಜನೆಯೊಂದು ಕಾರ್ಯಾಗತಗೊಂಡಿದೆ.

ಶಾಸಕ ವಾರ್‍ರೂಮ್ ಮೂಲಕ ಸಂಘ ಸಂಸ್ಥೆಗಳ ಕೊಡುಗೆಯ ಮೂಲಕ ಈ ಕಾರ್ಯ ಆರಂಭಿಸಲಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ್ ದರ್ಬೆ ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಸುಮಾರು 50 ಕ್ಕೂ ಹೆಚ್ಚು ಮಂದಿ ಡಯಾಲಿಸಿಸ್ ಚಿಕಿತ್ಸೆ ಪಡೆಯಲು ಬರುತ್ತಿದ್ದು, ಇವರಲ್ಲಿ ಬಹುತೇಕ ಮಂದಿ ಬಡ ವರ್ಗದವರಾಗಿದ್ದಾರೆ. ಲಾಕ್‍ಡೌನ್ ಹಿನ್ನಲೆಯಲ್ಲಿ ಈ ಜನತೆಗೆ ಡಯಾಲಿಸಿಸ್ ಆದ ಬಳಿಕ ಮನೆಗೆ ಹೋಗಲು ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಉಚಿತ ವಾಹನ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ. ಪುತ್ತೂರು ರೋಟರಿ ಕ್ಲಬ್, ರೋಟರಿ ಕೇಂದ್ರ ಸಂಸ್ಥೆ ಮತ್ತು ವರ್ತಕ ವರ್ಗದ ದಾನಿಗಳು ಈ ಉಚಿತ ವಾಹನ ಕೊಡುಗೆಯ ಸೇವೆಯನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News