×
Ad

ಭಟ್ಕಳ: ಆಶಾ ಕಾರ್ಯಕರ್ತೆಯರಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ

Update: 2020-04-23 20:33 IST

ಭಟ್ಕಳ: ಕೋವಿಡ್-19 ಕಾರ್ಯಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಶಾಸಕ ಸುನಿಲ್ ನಾಯ್ಕ ಅವರು ದಿನಸಿ ಸಾಮಗ್ರಿಗಳ ಕಿಟ್ ಹಾಗೂ ಮಾಸ್ಕ್ ವಿತರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊರೋನ ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿ ದಿನವೂ ಕೂಡಾ ಕಲ್ನಡಿಗೆಯಲ್ಲಿ ಮನೆ ಮನೆಗೆ ಹೋಗಿ ವಿವರಗಳನ್ನು ಸಂಗ್ರಹಿಸಿ ಕೋವಿಡ್-19 ತಡೆಗಟ್ಟಲು ಸರಕಾರಕ್ಕೆ ನೆರವಾಗುತ್ತಿರುವ ಕಾರ್ಯ ಸಾಮಾನ್ಯವಲ್ಲ, ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.

ಭಟ್ಕಳದಂತಹ ಪ್ರದೇಶದಲ್ಲಿ ಅತ್ಯಂತ ಉತ್ತಮವಾಗಿ ಕಾರ್ಯ ನಿರ್ವಹಿಸಿ, ಎಲ್ಲೆಡೆ ಕೊರೊನಾ ಕುರಿತು ಜಾಗೃತಿ ಮೂಡಿಸಲು ಶಕ್ತರಾಗಿದ್ದಾರೆ.  ಮುಂದಿನ ದಿನಗಳಲ್ಲಿ ಸರಕಾರದ ಗಮನ ಸೆಳೆದು ಆಶಾ ಕಾರ್ಯಕರ್ತರಿಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಿಕೊಡಲು ಶ್ರಮಿಸುವುದಾಗಿ ಭರವಸೆ ನೀಡಿದರು. 

ಲಾಕ್‍ಡೌನ್‍ನಿಂದಾಗಿ ಜನರು ಸಂಕಷ್ಟದಲ್ಲಿರುವಾಗ ಹಲವಾರು ಸಂಘ ಸಂಸ್ಥೆಗಳು, ಸರ್ಪನಕಟ್ಟೆ ಸ್ಪೋಟ್ರ್ಸ ಕ್ಲಬ್, ಮಾಜಿ ಶಾಸಕ ಮಂಕಾಳ ವೈದ್ಯ ಸೇರಿದಂತೆ ಹಲವರು ಜನರ ಸಂಕಷ್ಟಕ್ಕೆ ಸ್ಪಂಧಿಸಿದ್ದು ಅವರೆಲ್ಲರಿಗೂ ಧನ್ಯವಾದ ಹೇಳಿದ ಅವರು ಮುಂದಿನ ದಿನಗಳಲ್ಲಿಯೂ ಜನತೆಯ ಪರ ಇರುವುದಾಗಿ ತಿಳಿಸಿದರು. 

ಆಶಾ ಕಾರ್ಯಕರ್ತೆ ಗೀತಾ ನಾಯ್ಕ ಮಾತನಾಡಿ ಕೋವಿಡ್-19 ಮಾಹಿತಿ ಸಂಗ್ರಹದ ಸಂದರ್ಭದಲ್ಲಿ ತಮಗಾದ ಅನುಭವವನ್ನು ವಿವರಿಸಿ ಆಶಾ ಕಾರ್ಯಕರ್ತರನ್ನು ಸಂಶಯದಿಂದ ನೋಡಲಾಗುತ್ತಿತ್ತು. ಆದರೂ ನಾವು ಇದಕ್ಕೆಲ್ಲಾ ಕಿವಿಗೊಡದೇ ನಮಗೆ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ ಎಂದರು.  

ಉಪಸ್ಥಿತರಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ ಭಟ್, ಬಿಜೆಪಿ ಮಂಡಳಾಧ್ಯಕ್ಷ ಸುಬ್ರಾಯ ದೇವಡಿಗ, ಮಾಜಿ ಅಧ್ಯಕ್ಷ ರಾಜೇಶ ನಾಯ್ಕ, ಹಿರಿಯ ಆರೋಗ್ಯ ಸಹಾಯಕ ಈರಯ್ಯ ದೇವಡಿಗ ಮುಂತಾದವರು ಮಾತನಾಡಿದರು. ಬಿಜೆಪಿ ಮುಖಂಡರಾದ ಕೃಷ್ಣಾ ನಾಯ್ಕ ಆಸರಕೇರಿ, ರಾಜು ಭಂಡಾರಿ, ಮಂಜುನಾಥ ನಾಯ್ಕ, ಭಾಸ್ಕರ ದೈಮನೆ, ಮೋಹನ ನಾಯ್ಕ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News