×
Ad

ಭಟ್ಕಳ: ಹ್ಯೂಮನ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಆಹಾರ ಕಿಟ್ ವಿತರಣೆ

Update: 2020-04-23 20:36 IST

ಭಟ್ಕಳ: ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಮುರ್ಡೇಶ್ವರ ವತಿಯಿಂದ ಆಹಾರದ ಕಿಟ್ ವಿತರಿಸಲಾಯಿತು.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಆಗಿರುವ ಈ ಸಂದರ್ಭದಲ್ಲಿ ಮುರ್ಡೇಶ್ವರದ ಸುತ್ತ ಮುತ್ತ ನೀರಗದ್ದೆ, ಸಣ್ಣಬಲ್ಸೆ, ಭಟ್ರಗದ್ದೆ, ಹಳ್ಳದಬಾಗಿಲು, ದೊಡ್ಡಬಲ್ಸೆ, ಜನತಾ ಕಾಲೋನಿ ಮುಂತಾದ ಮಜಿರೆಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳಿಗೆ ಸುಮಾರು 1000 ಸಾವಿರ ರೂ. ಮೌಲ್ಯದ ದಿನಸಿ ಸಾಮಗ್ರಿಗಳುಳ್ಳ ಕಿಟ್ ವಿತರಿಸಿದ್ದು, ಈ ಭಾಗದ ಜನರ ಕಷ್ಟಕ್ಕೆ ಸ್ಪಂಧಿಸಿದ ಅವರನ್ನು ಬಸ್ತಿಮಕ್ಕಿಯ ಸಿರಗನ್ನಡ ಗೆಳೆಯರ ಬಳಗದ ಅಧ್ಯಕ್ಷ ವಾಸು ಎಂ. ನಾಯ್ಕ ಅಭಿನಂದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News