×
Ad

ಭಟ್ಕಳ: ಹಿರಿಯ ಶುಶ್ರೂಷಕಿ ಗೀತಾ ಶೇಟ್ ನಿಧನ

Update: 2020-04-23 21:17 IST

ಭಟ್ಕಳ: ಇಲ್ಲಿನ ಆರ್. ಎನ್. ಆಸ್ಪತ್ರೆಯಲ್ಲಿ ಹಿರಿಯ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸಿದ್ದ ಗೀತಾ ಆರ್. ಶೇಟ್ ಇವರು ಹುರುಳಿಸಾಲ್‍ನ ತಮ್ಮ ಮಗಳ ಮನೆಯಲ್ಲಿ ಇತ್ತೀಚೆಗೆ ನಿಧನರಾಗಿದ್ದಾರೆ. 

ಮೃತರು ಭಟ್ಕಳದ ಖಾಸಗೀ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸಿ ನಂತರ ತೆರ್ನಮಕ್ಕಿಯಲ್ಲಿ ನೆಲೆಸಿ ಹಲವಾರು ವರ್ಷಗಳ ಕಾಲ ಶುಶ್ರೂಷಕಿಯಾಗಿ ಕೆಲಸ ಮಾಡಿದ್ದು ಸಾವಿರಾರು ಜನರಿಗೆ ಹೆರಿಗೆ ಮಾಡಿಸಿ ಆ ಭಾಗದಲ್ಲಿ ಜನಪ್ರಿಯರಾಗಿದ್ದರು.  ನಂತರ ಡಾ. ಆರ್. ಎನ್. ಶೆಟ್ಟಿಯವರ ಕೋರಿಕೆಯ ಮೇರೆಗೆ ಆರ್.ಎನ್. ಆಸ್ಪತ್ರೆಯ ಭಟ್ಕಳ ಘಟಕದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವಯೋ ಸಹಜ ಅನಾರೋಗ್ಯಕ್ಕೆ ಈಡಾಗಿದ್ದರು. ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News