ಆನ್‌ಲೈನ್ ನಗದು ವರ್ಗಾವಣೆ: ದೂರು
Update: 2020-04-23 22:10 IST
ಉಡುಪಿ, ಎ.23: ಎಟಿಎಂ ಕಾರ್ಡ್‌ನ ಒಟಿಪಿ ನಂಬರ್ ಪಡೆದು ಆನ್ ಲೈನ್ ಮೂಲಕ ಲಕ್ಷಾಂತರ ರೂ. ಹಣ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧರ್ಮರಾಜ ಕಂಬಳಿ ಎಂಬವರಿಗೆ ಎ.7ರಂದು ಅಪರಿಚಿತರೊಬ್ಬ ವಿಜಯಾ ಬ್ಯಾಂಕ್‌ನಿಂದ ಕರೆ ಮಾಡುವುದಾಗಿ ಹೇಳಿ, ಬ್ಲಾಕ್ ಆಗಿರುವ ಎಟಿಎಂ ಕಾರ್ಡ್ ಕ್ರಿಯಾಶೀಲಗೊಳಿಸುವುದಾಗಿ ತಿಳಿಸಿದನು. ನಂತರ ಧರ್ಮರಾಜರ ಮೊಬೈಲ್ಗೆ ಬಂದ ಓಟಿಪಿ ಪಡೆದು ಅವರ ಖಾತೆಯಿಂದ ಒಟ್ಟು 1,79,493 ರೂ. ಹಣ ವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ.