ಪರಾವನಿಗೆ ಇಲ್ಲದೆ ಜನರ ಸಾಗಾಟ: ಲಾರಿ ಸಹಿತ ಚಾಲಕ, ಕ್ಲೀನರ್ ವಶಕ್ಕೆ
Update: 2020-04-23 22:17 IST
ಉಡುಪಿ, ಎ.23: ಯಾವುದೇ ಪರವಾನಿಗೆ ಇಲ್ಲದೆ ಹಾಗೂ ಸುರಕ್ಷಾ ಕ್ರಮ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಜನರನ್ನು ಗುಂಪಾಗಿ ಕುಳ್ಳಿರಿಸಿ ಕೊಂಡು ಸಾಗಿಸುತ್ತಿದ್ದ ಚಾಲಕ ಹಾಗೂ ಕ್ಲೀನರ್ ಸಹಿತ ಲಾರಿಯನ್ನು ಉಡುಪಿ ಪೊಲೀರು ವಶಕ್ಕೆ ಪಡೆದುಕೊಂಡಿದ್ದಾರೆ.
ಎ.23ರಂದು ಬೆಳಗಿನ ಜಾವ 4.15ರ ಸುಮಾರಿಗೆ ಕಾರ್ಮಿಕರನ್ನು ಸಾಗಿ ಸುತ್ತಿದ್ದ ಲಾರಿಯನ್ನು ಸಂತೆಕಟ್ಟೆ ಎಂಬಲ್ಲಿ ನಿರ್ಮಿಸಿದ ಚೆಕ್‌ಪೋಸ್ಟ್ ಬಳಿ ತಪಾ ಸಣೆಗೆ ಒಳಪಡಿಸಲಾಯಿತು. ಈ ವೇಳೆ ಕಾರ್ಮಿಕರನ್ನು ಯಾವುದೇ ಪರವಾನಿಗೆ ಇಲ್ಲದೆ ಸಾಗಿಸುತ್ತಿರುವುದು ಕಂಡುಬಂತು.
ಈ ಹಿನ್ನೆಲೆಯಲ್ಲಿ ಚಾಲಕ ಹಾವೇರಿ ಜಿಲ್ಲೆಯ ಶ್ರೀಕಾಂತ ಗಾಣಿಗೇರ(29) ಹಾಗೂ ಕ್ಲೀನರ್ ಬೆಳಗಾವಿ ಜಿಲ್ಲೆಯ ಅಭಿಮನ್ಯು ಲಮಾಣಿ(34) ಎಂಬವ ರನ್ನು ಬಂಧಿಸಲಾಯಿತು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.