ಉಡುಪಿ: ಲಾಕ್‌ಡೌನ್ ಮಧ್ಯೆ ರಮಝಾನ್ ಆರಂಭ
ಉಡುಪಿ, ಎ.23: ಕೊರೋನ ಭೀತಿ ಹಾಗೂ ಲಾಕ್‌ಡೌನ್ ಮಧ್ಯೆ ರಮಝಾನ್ ಉಪವಾಸಕ್ಕೆ ಉಡುಪಿ ಜಿಲ್ಲೆಯಾದ್ಯಂತ ಸಿದ್ಧತೆಗಳನ್ನು ನಡೆಸಿದ್ದಾರೆ.
ಜಿಲ್ಲಾಡಳಿತದ ಆದೇಶದಂತೆ ರಮಝಾನ್ ತಿಂಗಳ ಮೊದಲ ರಾತ್ರಿಯಾಗಿ ರುವ ಇಂದು ಮಸೀದಿಗಳಲ್ಲಿ ರಾತ್ರಿ ನಡೆಯುವ ವಿಶೇಷ ಸಾಮೂಹಿಕ ತರಾವಿಹ್ ನಮಾಝ್ ನಡೆಯಲಿಲ್ಲ. ಅದರ ಬದಲು ಮನೆ ಗಳಲ್ಲಿಯೇ ತರಾವಿಹ್ ನಮಾಝ್ ನಿರ್ವಹಿಸಿದರು.
ಅದೇ ರೀತಿ ಸಹರಿಗೆ ಬೇಕಾದ ತರಕಾರಿಗಳು ಹಾಗೂ ಇಫ್ತಾರ್‌ಗೆ ಬೇಕಾದ ಹಣ್ಣು ಹಂಪಲುಗಳನ್ನು ಜಿಲ್ಲಾಡಳಿತ ನಿಗದಿ ಪಡಿಸಿರುವ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಖರೀದಿಸುತ್ತಿರುವ ದೃಶ್ಯ ಕಂಡುಬಂತು. ಉಪವಾಸ ಸಂದರ್ಭದಲ್ಲಿ ಟೊಮೋಟೊ, ಕಾಯಿಮೆಣಸು, ಈರುಳ್ಳಿ ಬೆಲೆ ಸಂಪೂರ್ಣ ಇಳಿಕೆಯಾಗಿದೆ. ತರಕಾರಿ ಬೆಲೆ ಇಳಿಕೆಯೂ ಆಗದೆ ಏರಿಕೆಯೂ ಆಗಿಲ್ಲ ಎನ್ನುತ್ತಾರೆ ತರಕಾರಿ ವ್ಯಾಪರಸ್ಥರು.
ಜಿಲ್ಲೆಯಲ್ಲಿ ಹಣ್ಣು ಹಂಪಲುಗಳ ಬೆಲೆ ಸಾಕಷ್ಟು ಏರಿಕೆ ಕಂಡಿದೆ. ಕೆಲ ದಿನಗಳ ಹಿಂದೆ ತೀರಾ ಇಳಿಕೆ ಕಂಡಿದ್ದ ಅನಾನಸು ಬೆಲೆ ಏಕಾಏಕಿ ಏರಿಕೆ ಕಂಡಿದೆ. ಅದೇ ರೀತಿ ಇತರ ಹಣ್ಣುಗಳ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಉದ್ಯೋಗ ಇಲ್ಲದೆ ಆರ್ಥಿಕ ಸಮಸ್ಯೆಗೆ ತುತ್ತಾಗಿರುವ ಕುಟುಂಬಗಳಿಗೆ ಕೆಲವು ಸಂಘ ಸಂಸ್ಥೆಗಳು ರಂಝಾನ್ ಕಿಟ್‌ಗಳ್ನು ನೀಡುವ ಕಾರ್ಯದಲ್ಲಿ ತೊಡಗಿದೆ.