×
Ad

ಕೃಷ್ಣಯಾಜಿ ಇಡಗುಂಜಿ ನಿಧನ

Update: 2020-04-24 22:06 IST

ಉಡುಪಿ : ಔಚಿತ್ಯ ಪೂರ್ಣವಾಗಿ ಚ೦ಡೆಯನ್ನು ನುಡಿಸುತ್ತಿದ್ದ, ದೀರ್ಘಕಾಲ ಇಡಗುಂಜಿ ಮೇಳದಲ್ಲಿ ಮತ್ತು ಗು೦ಡುಬಾಳ ಮೇಳದಲ್ಲಿ ಕಲಾಸೇವಗೈದ ಸರಳ ಸಜ್ಜನಿಕೆಯ ಕೃಷ್ಣಯಾಜಿ ಇಡಗುಂಜಿ (72) ಶುಕ್ರವಾರ ಸ೦ಜೆ ಹೃದಯಾಘಾತದಿಂದ ಹೊನ್ನಾವರದ  ಮನೆಯಲ್ಲಿ ನಿಧಾನರಾದರು.

ಇವರು ಮಂಟಪರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನಗಳಲ್ಲಿ ಚೆಂಡೆ ವಾದಕರಾಗಿ ಹಿಮ್ಮೇಳದ ಮೆರುಗನ್ನು ವೃದ್ಧಿಸಿದ್ದರು. ಅಕಾಡೆಮಿ ಪ್ರಶಸ್ತಿ, ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣೆಯ ಯಕ್ಷಗಾನ ಕಲಾರ೦ಗ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದರು.

ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ಅಗಲುವಿಕೆಗೆ ಯಕ್ಷಗಾನ ಕಲಾರ೦ಗದ ಅಧ್ಯಕ್ಷ ಕೆ. ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News