×
Ad

ಎಸ್ಸೆಸ್ಸೆಫ್ ಟ್ಯಾಲೆಂಟ್ ಹಂಟ್: ಮುಹಮ್ಮದ್ ಅನ್ಫಾಲ್ ಪ್ರಥಮ

Update: 2020-04-24 22:28 IST

ಕಾಪು : ಕೊರೋನ ಲಾಕ್ ಡೌನ್ ನಲ್ಲಿ ಪ್ರತಿಭಾವಂತರ ಪ್ರತಿಭೆಗಳ ಅನಾವರಣಕ್ಕೆ ಕಾಪು ಡಿವಿಷನ್ ಎಸ್ಸೆಸ್ಸೆಫ್ ಆಯೋಜಿಸಿದ ಶಾಕ್ಸಿನ್-20 ಆನ್‍ಲೈನ್ ಟಾಲೆಂಟ್ ಹಂಟ್ ಇತ್ತೀಚೆಗೆ ಜರಗಿತು.

ಈ ಸ್ಪರ್ಧೆಯ ಜೂನಿಯರ್ ವಿಭಾಗದ ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಪೊಲ್ಯ ಶಾಖೆಯ ಮುಹಮ್ಮದ್ ಅನ್ಫಾಲ್ ಪ್ರಥಮ ಸ್ಥಾನ ಪಡೆದಿದ್ದಾರೆ. ಕೊಂಬಗುಡ್ಡೆಯ ಅನೀಝ್ ಹಸನ್, ಉಚ್ಚಿಲ ಶಾಖೆಯ ಸಲೀತ್ ದ್ವಿತೀಯ ಹಾಗೂ ಚಂದ್ರನಗರ ಶಾಖೆಯ ಅಶ್ರಫ್ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News