ಕಾರ್ಕಳ : ಕಳವು ಪ್ರಕರಣ: ಸೊತ್ತು ಸಹಿತ ಇಬ್ಬರು ಆರೋಪಿಗಳು ಸೆರೆ
Update: 2020-04-24 22:45 IST
ಕಾರ್ಕಳ: ಸೂಡ ಗ್ರಾಮದಲ್ಲಿ ಕ್ರಶರ್ ನಲ್ಲಿ ಅಳವಡಿಸಿದ ಸುಮಾರು 40 ಲಕ್ಷ ರೂ. ಮೌಲ್ಯದ ಯಂತ್ರೋಪಕರಣಗಳ ಕಳವು ಪ್ರಕರಣದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೈನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದಾರೆ.
ಕ್ರಶರ್ ನಲ್ಲಿ ಜೋಡಣೆಯಾಗಿದ್ದ ಯಂತ್ರೋಪಕರಣವು ಫೆ. 27ರಿಂದ ಎಪ್ರಿಲ್ 22ರ ಅವಧಿಯಲ್ಲಿ ಕಳವು ಆಗಿದ್ದು, ಈ ಕುರಿತು ಸುರೇಶ್ ಶೆಟ್ಟಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಸೂಡಾದ ಶಿಕ್ಷಕ ರಿತೇಶ್ ಶೆಟ್ಟಿ ( 50) ಹಾಗೂ ಚರಣ್ ನಾಯಕ್ ಸೂಡಾ( 29) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಚರಣ್ ನಾಯಕ್ ಸೂಡಾ ಸ್ಥಳೀಯ ವಾಹಿನಿಯೊಂದರಲ್ಲಿ ವರದಿಗಾರನಾಗಿ ದುಡಿಯುತ್ತಿದ್ದನು. ಆತನ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರಿನ ಬಂದರಿನಲ್ಲಿ ಗುಜುರಿ ವ್ಯಾಪಾರಿಗಳನ್ನು ಚರಣ್ ನಾಯಕ್ ಸೂಡಾ ಸಂಪರ್ಕಿಸಿ ವ್ಯವಹಾರ ಕುದುರಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.