ಚೀನಾದ ಕೊರೋನ ಲಸಿಕೆ ಮಂಗಗಳಲ್ಲಿ ಯಶಸ್ವಿ

Update: 2020-04-24 17:48 GMT

ಬೀಜಿಂಗ್, ಎ. 24: ನೋವೆಲ್-ಕೊರೋನ ವೈರಸ್‌ನ ಸಂಭಾವ್ಯ ಲಸಿಕೆಯೊಂದನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಲಾಗಿದ್ದು, ಅದು ಮಂಗಗಳನ್ನು ಸೋಂಕಿನಿಂದ ‘ಬಹುತೇಕ’ ರಕ್ಷಿಸಿದೆ ಎಂದು ಚೀನಾದ ಬೃಹತ್ ಔಷಧ ತಯಾರಿಕಾ ಕಂಪೆನಿ ಸಿನೊವಾಕ್ ಬಯೋಟೆಕ್‌ನ ಅಂಕಿಅಂಶಗಳು ತೋರಿಸಿವೆ.

ಕೊರೋನವೈರಸ್‌ಗೆ ಲಸಿಕೆಗಳನ್ನು ತಯಾರಿಸಲು ಜಗತ್ತಿನಾದ್ಯಂತ ಸಂಶೋಧನೆಗಳು ನಡೆಯುತ್ತಿದ್ದು, ಅವುಗಳ ಪೈಕಿ ಇದೂ ಒಂದಾಗಿದೆ.

 ಎರಡು ವಿಭಿನ್ನ ಪ್ರಮಾಣಗಳಲ್ಲಿ ನಮ್ಮ ಲಸಿಕೆಯನ್ನು ಎಂಟು ರೇಸಸ್ ಮೆಕಾಕ್ ಮಂಗಗಳಿಗೆ ಚುಚ್ಚಲಾಯಿತು ಹಾಗೂ ಮೂರು ವಾರಗಳ ಬಳಿಕ ಅವುಗಳನ್ನು ವೈರಸ್‌ಗೆ ಒಡ್ಡಲಾಯಿತು ಎಂದು ಔಷಧ ತಯಾರಿಕಾ ಕಂಪೆನಿ ತಿಳಿಸಿದೆ. ಆ ಮಂಗಗಳಲ್ಲಿ ರೋಗ ಕಾಣಿಸಿಕೊಳ್ಳಲಿಲ್ಲ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News