ಲಾಕ್ ಡೌನ್ ಸಡಿಲಿಕೆ: ಯಾವ ಅಂಗಡಿಗಳಿಗೆ ಅವಕಾಶ; ಇಲ್ಲಿದೆ ಮಾಹಿತಿ

Update: 2020-04-25 09:53 GMT

ಹೊಸದಿಲ್ಲಿ: ಶುಕ್ರವಾರ ಮಧ್ಯರಾತ್ರಿ ಕೇಂದ್ರ ಸರಕಾರ ಹೊರಡಿಸಿದ ಲಾಕ್ ಡೌನ್ ಸಡಲಿಕೆ ಕುರಿತಾದ ಹೊಸ ಆದೇಶದಂತೆ ಇಂದಿನಿಂದ ಕೊರೋನವೈರಸ್ ಹಾಟ್ ಸ್ಪಾಟ್ ಹಾಗೂ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಇತರೆಡೆ  ಅಗತ್ಯ ವಸ್ತುಗಳ ಹೊರತಾಗಿ ಇತರ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು, ಕ್ಷೌರದಂಗಡಿಗಳು ಹಾಗೂ ಟೈಲರ್ ಅಂಗಡಿಗಳನ್ನು ತೆರೆಯಬಹುದಾಗಿದೆ. ಆದರೆ ಮಾಲ್‍ಗಳು, ಸಿನೆಮಾ ಥಿಯೇಟರ್ ಹಾಗೂ ಮಾರ್ಕೆಟ್ ಕಾಂಪ್ಲೆಕ್ಸ್ ಮತ್ತು ಸಾರಿಗೆ ಸಂಚಾರ ಎಂದಿನಂತೆ ಬಂದ್ ಆಗಿರಲಿವೆ. ಅದೇ ಸಮಯ ಇ-ಕಾಮರ್ಸ್ ಸಂಸ್ಥೆಗಳು  ಕೇವಲ ಅಗತ್ಯ ವಸ್ತುಗಳನ್ನು ಮಾತ್ರ ಮಾರಾಟ ಮಾಡಬಹುದಾಗಿದೆ.

ಅಂಗಡಿಗಳನ್ನು ತೆರೆಯುವವರಿಗೆ ಮಾಸ್ಕ್, ಗ್ಲವ್ಸ್ ಹಾಗೂ ಸಾಮಾಜಿಕ ಅಂತರ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಆದರೆ ನಿರ್ಬಂಧಗಳನ್ನು ಸಡಿಲಿಕೆ ಮಾಡುವ ಅಂತಿಮ ನಿರ್ಧಾರ ರಾಜ್ಯ ಸರಕಾರಗಳಿಗೆ ಬಿಟ್ಟು ಬಿಡಲಾಗಿದೆ.

►ವಸತಿ ಪ್ರದೇಶಗಳಲ್ಲಿ ಹಾಗೂ ಹತ್ತಿರದ ಮಾರ್ಕೆಟ್‍ಗಳಲ್ಲಿನ ಅಂಗಡಿಗಳನ್ನು ತೆರೆಯಬಹುದು.

►ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳಲ್ಲಿ  ನೋಂದಣಿಗೊಂಡ ಅಂಗಡಿಗಳು ಹಾಗೂ ಮಾರ್ಕೆಟ್‍ಗಳನ್ನು ತೆರೆಯಬಹುದು. ಆದರೆ ನಗರ ಪ್ರದೇಶಗಳಲ್ಲಿ ಏಕಾಂಗಿ ಅಂಗಡಿಗಳು ಹಾಗೂ ವಸತಿ ಪ್ರದೇಶದ ಅಂಗಡಿಗಳನ್ನು ತೆರೆಯಬಹುದು.

►ಸೆಲೂನುಗಳನ್ನು ತೆರೆಯಬಹುದಾದರೂ ಮಾರ್ಕೆಟ್ ಸಂಕೀರ್ಣದಲ್ಲಿರುವ ಸೆಲೂನ್‍ಗಳನ್ನು ತೆರೆಯುವ ಹಾಗಿಲ್ಲ.

►ವಸತಿ ಪ್ರದೇಶಗಳ ಸಮೀಪವಿರುವ ಟೈಲರ್ ಅಂಗಡಿಗಳನ್ನು ತೆರೆಯಬಹುದು.

►ಮುನಿಸಿಪಲ್ ವ್ಯಾಪ್ತಿ ಪ್ರದೇಶದ ಹೊರಗಡೆ ನೋಂದಣಿ ಹೊಂದಿದ ಮಾರ್ಕೆಟ್‍ಗಳಲ್ಲಿನ ಮಳಿಗೆಗಳು ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯಾಚರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News