ಕೋವಿಡ್-19 ಮಾದರಿ ಸಂಗ್ರಹ ಕೇಂದ್ರಕ್ಕೆ ಕಾರ್ಯದರ್ಶಿ ಭೇಟಿ
Update: 2020-04-25 19:59 IST
ಉಡುಪಿ, ಎ.25: ಉಡುಪಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಆರಂಭಿಸಿರುವ ಕೋವಿಡ್-19 ಮಾದರಿ ಸಂಗ್ರಹ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್, ಅಲ್ಲಿನ ಕಾರ್ಯ ವಿಧಾನವನ್ನು ಪರಿಶೀಲಿಸಿದರು.
ಈ ಕೇಂದ್ರವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿಗೊಳಿಸುವಂತೆ ಮತ್ತು ಕೈಗೊಳ್ಳಬೇಕಾದ ವಿವಿಧ ಕಾರ್ಯಗಳ ಕುರಿತು ಅವರು ಸಂಬಂಧಿತರಿಗೆ ಸೂಚನೆ ಗಳನ್ನು ನೀಡಿದರು.
ಜಿಲ್ಲಾಧಿಕಾರಿ ಜಿ.ಜಗದೀಶ್, ಸಿಇಓ ಪ್ರೀತಿ ಗೆಹ್ಲೋಟ್, ಎಸ್ಪಿ ಷ್ಣುವರ್ಧನ್, ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್, ಜಿಲ್ಲಾ ಸರ್ಜನ್ ಡಾ. ಮಧು ಸೂದನ್ ನಾಯಕ್, ಜಿಲ್ಲಾ ಕೊರೋನ ನಿಯಂತ್ರಣದ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಡಾ. ಚಂದ್ರಶೇಖರ್ ಅಡಿಗ ಉಪಸ್ಥಿತರಿದ್ದರು.