ಬೆಂಕಿ ಅಕಸ್ಮಿಕದಿಂದ ವೃದ್ಧೆ ಮೃತ್ಯು
Update: 2020-04-25 20:11 IST
ಹೆಬ್ರಿ, ಎ.26: ಬೆಂಕಿ ಅಕಸ್ಮಿಕದಿಂದ ಗಾಯಗೊಂಡಿದ್ದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಹೆಬ್ರಿ ಗ್ರಾಮದ ಗುಳಿಬೆಟ್ಟು ಎಂಬಲ್ಲಿ ಎ.24ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಗುಳಿಬೆಟು ನಿವಾಸಿ ಗಿರಿಜಾ ಶೇಡ್ತಿ(90) ಎಂದು ಗುರುತಿಸ ಲಾಗಿದೆ. ಉಬ್ಬಸ ಹಾಗೂ ಇನ್ನಿತರ ಖಾಯಿಲೆಗಳಿಂದ ಬಳಲುತ್ತಿದ್ದ ಇವರು, ಮಾನಸಿಕ ಅಸ್ವಸ್ಥರಾಗಿದ್ದರು. ಮಾ.12ರಂದು ಅಡುಗೆ ಮನೆಯಲ್ಲಿರುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರವಾಗಿ ಗಾಯ ಗೊಂಡಿದ್ದರು. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ಆರೈಕೆಯಲ್ಲಿದ್ದ ಇವರು, ಮೃತಪಟ್ಟಿ ದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.