​ವಾರಾಹಿ ಕಾಲುವೆಗೆ ಬಿದ್ದು ಬಾಲಕಿ ಮೃತ್ಯು

Update: 2020-04-25 15:11 GMT

ಕೋಟ, ಎ.25: ವಾರಾಹಿ ಕಾಲುವೆಗೆ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು, ನೀರಿನಲ್ಲಿ ಮುಳುಗಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಹೊಂಬಾಡಿ ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಎಂಬಲ್ಲಿ ಶುಕ್ರವಾರ ಅಪರಾಹ್ನ ನಡೆದ ಬಗ್ಗೆ ವರದಿಯಾಗಿದೆ.

ಹುಣ್ಸೆಮಕ್ಕಿಯ ದುರ್ಗಾ ನಿಲಯದ ಭಾಸ್ಕರ ಕುಲಾಲ್ ಎಂಬವರ 8ವರ್ಷ 10 ತಿಂಗಳ ಪುತ್ರಿ ಮೇಘನಾ ಮೃತ ಬಾಲಕಿ. ಮೇಘನಾ, ಸಚಿನ್ ಎಂಬ ಬಾಲಕನೊಂದಿಗೆ ಮನೆಯ ಪಕ್ಕದಲ್ಲಿರುವ ಸಂಬಂಧಿ ಸುಜಾತರ ಮನೆಗೆ ಊಟಕ್ಕೆಂದು ಅಪರಾಹ್ನ 1:00ಕ್ಕೆ ತೆರಳಿದ್ದರು. ಇಬ್ಬರೂ ಮನೆಯತ್ತ ನಡೆದುಕೊಂಡು ಹೋಗುವಾಗ ಮನೆಯ ಪಕ್ಕದಲ್ಲಿದ್ದ ವಾರಾಹಿ ಕಾಲುವೆಗೆ ಇಬ್ಬರೂ ಅಕಸ್ಮಿಕವಾಗಿ ಕಾಲುಜಾರಿ ಬಿದ್ದಿದ್ದರು. ಊರವರು ಇಬ್ಬರನ್ನೂ ಎತ್ತಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಇವರಲ್ಲಿ ಮೇಘನಾ ಸಂಜೆ ಮೃತಪಟ್ಟರು. ಸಚಿನ್ ಚೇತರಿಸಿಕೊಂಡಿದ್ದಾಗಿ ಪ್ರಕರಣ ದಾಖಲಿಸಿರುವ ಕೋಟ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News