ಕಂಬಳಬೆಟ್ಟು ಅಂದುಂಞ ಹಾಜಿ ಪ್ಯಾಮಿಲಿ ಟ್ರಸ್ಟ್ ನೇತೃತ್ವದಲ್ಲಿ ರಮಝಾನ್ ಕಿಟ್, ದಿನಸಿ ಸಾಮಗ್ರಿ ವಿತರಣೆ

Update: 2020-04-25 15:36 GMT

ವಿಟ್ಲ : ಕಂಬಳಬೆಟ್ಟು ಅಂದುಂಞ ಹಾಜಿ ಪ್ಯಾಮಿಲಿ ಜನಪ್ರಿಯ ಟ್ರಸ್ಟ್ ಮತ್ತು ಸ್ಥಳೀಯ ಪ್ರಮುಖರ ನೇತೃತ್ವದಲ್ಲಿ ಊರ ದಾನಿಗಳ ಸಹಕಾರದಲ್ಲಿ ಒಟ್ಟು 360 ಕುಟುಂಬಗಳಿಗೆ ರಮಝಾನ್ ಕಿಟ್ ಹಾಗೂ ದಿನಸಿ ಸಾಮಗ್ರಿ ವಿತರಿಸಲಾಯಿತು.

ವಲಸೆ ಕಾರ್ಮಿಕರಿಗೆ, ಜಮಾಅತ್ ಸದಸ್ಯರಿಗೆ ಹಾಗೂ ಸ್ಥಳೀಯ ಸರ್ವಧರ್ಮಿಯರಿಗೆ ವಿತರಿಸಲಾಯಿತು. ಅಕ್ಕಿ ಹಾಗೂ ದಿನಬಳಕೆ ವಸ್ತುಗಳು ಸೇರಿದಂತೆ ಅಂದಾಜು 5 ಲಕ್ಷಕ್ಕಿಂತಲೂ ಮಿಕ್ಕಿ ಮೌಲ್ಯದ ಸುಮಾರು 15ಕ್ಕಿಂತಲೂ ಅಧಿಕ ವಸ್ತುಗಳನ್ನು ವಿತರಿಸಲಾಯಿತು. ವಿಟ್ಲ ಮುಡ್ನೂರು ಗ್ರಾಮದಲ್ಲಿ ಹಲವು ವಲಸೆ ಕಾರ್ಮಿಕರಿದ್ದರೆ. ಅದೇ ಬಡವರು ಕೂಡ ಜೀವನ ನಡೆಸುತ್ತಿದ್ದಾರೆ. ಲಾಕ್ ಡೌನ್‍ನಿಂದ ಹಲವು ಬಡವರು ಕಂಗೆಟ್ಟಿ ದ್ದರು. ಇದರಿಂದ ಗಮನಹರಿಸಿದ ಸ್ಥಳೀಯ ಟ್ರಸ್ಟ್ ಹಾಗೂ ಊರ ಪ್ರಮುಖರು ಕಿಟ್ ವಿತರಿಸಲು ಮುಂದಾಗಿದ್ದಾರೆ.

ವಿಟ್ಲ ಮುಡ್ನೂರು ಗ್ರಾಮ ಪಂ. ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ವಿತರಿಸಿದರು. ಕಂಬಳಬೆಟ್ಟು ಖರೀಬು ಇಬ್ರಾಹಿಂ ಮದನಿ ದುವಾಃ ಮಾಡಿದರು. ಮಸೀದಿ ಅಧ್ಯಕ್ಷ ಮೊಹಿದು ಹಾಜಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ ಬದ್ರಿಯಾ, ಕಾರ್ಯದರ್ಶಿ ಶಾಹುಲ್ ಹಮೀದ್ ನೆಕ್ಕರೆ, ಉಪಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸುನ್ನೀ, ಎಂ ಫ್ರೆಂಡ್ಸ್ ನ ರಶೀದ್ ವಿಟ್ಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News